ಸೂರಿಲ್ಲದ ವ್ಯಕ್ತಿಯೊಬ್ಬನಿಗೆ ಅಮೆರಿಕಾದ ರೆಸ್ಟೋರೆಂಟ್ ವೊಂದು ಯಾವ ರೀತಿ ಆಹಾರ ಹಾಗೂ ನೀರನ್ನು ಒದಗಿಸಿ ದಯೆ ತೋರುತ್ತಿದೆ ಎಂಬುದನ್ನು ಮಹಿಳೆಯೊಬ್ಬಳು ಹಂಚಿಕೊಂಡಿದ್ದಾಳೆ. ಇದು ಹಲವಾರು ಮಂದಿಯ ಹೃದಯ ಕರಗಿಸಿದೆ.
“ನ್ಯೂಯಾರ್ಕ್ ನ ಸ್ಟೇಟನ್ ಐಲ್ಯಾಂಡ್ ನ ಬಾಗೆಲ್ಸ್ ಎನ್ ಬನ್ಸ್ ಉದ್ಯೋಗಿಯ ಬಳಿ ಮನೆಯಿಲ್ಲದ ವ್ಯಕ್ತಿ ಬಂದು ಕುಡಿಯಲು ನೀರು ಕೇಳಿದ್ದಾನೆ. ಈ ವೇಳೆ ವೈಟರ್, ಸ್ವತಃ ಆತನಲ್ಲೇ ನೀರು ತೆಗೆದುಕೊಳ್ಳುವಂತೆ ಹೇಳಿದ್ದಾರೆ. ನೀರು ತೆಗೆದುಕೊಂಡ ವ್ಯಕ್ತಿಯು ವೈಟರ್ ಬಳಿ ಬಂದು ಧನ್ಯವಾದ ಹೇಳಿದ್ದಾನೆ. ಆದರೆ ನಾನು ನಿಜವಾಗಿಯೂ ಹಸಿದಿದ್ದೇನೆ ಎಂದಾಗ ತಡಮಾಡದ ವೈಟರ್ ಊಟ ಒದಗಿಸಿದ್ದಾನೆ” ಎಂದು ಮಹಿಳೆ ನಡೆದ ಘಟನೆಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಉದ್ಯೋಗಿಯ ಮಾತನ್ನು ವ್ಯಕ್ತಿ ಬಹಳ ಸಭ್ಯವಾಗಿ ಸ್ವೀಕರಿಸಿದರು ಎಂದು ಹೇಳಿದರು.
ಇನ್ನು ಮುಂದುವರಿದು ಹೇಳಿದ ಆಕೆ, ರೆಸ್ಟೋರೆಂಟ್ ಕೌಂಟರ್ ಬಳಿ ಹೋಗಿ ಆತನ ಪರವಾಗಿ ಹಣ ನೀಡಬಹುದೇ ಎಂದು ಮಹಿಳೆ ಕೇಳಿದಳಂತೆ. “ಉದ್ಯೋಗಿ ಜನೆಸ್ಸಾ ತುಂಬಾ ಕರುಣಾಮಯಿ. ಅವನು ಇದ್ದಾಗಲೆಲ್ಲಾ ನಾವು ಅವನಿಗೆ ಆಹಾರ ನೀಡುತ್ತೇವೆ. ಅವನು ಯಾವಾಗ ಬೇಕಾದರೂ ಇಲ್ಲಿ ಬಂದು ಊಟ ಮಾಡುತ್ತಾನೆ” ಎಂದು ಉತ್ತರಿಸಿದ್ದಾರೆ. ಸದ್ಯ ಉದ್ಯೋಗಿಯ ಈ ಮಾನವೀಯತೆಗೆ ಜನರು ಶ್ಲಾಘಿಸಿದ್ದಾರೆ.
https://www.instagram.com/p/CTDtsDcPxX-/?utm_source=ig_web_copy_link