ಆರೋಗ್ಯದ ಮೇಲಿನ ಕಾಳಜಿಯಿಂದ ಮಾಂಸಾಹಾರ ಸೇವನೆಯನ್ನು ಸೀಮಿತಗೊಳಿಸಬೇಕೆಂದು ಬಹುತೇಕರು ಅಂದುಕೊಂಡರೂ ಒಮ್ಮೆ ರುಚಿ ಕಂಡ ನಾಲಿಗೆಗಳು ಸುಮ್ಮನಿರಬೇಕಲ್ಲ?
ಇಂಥ ಮಂದಿಗೆಂದೇ ಪರಿಚಯಿಸಲಾದ ’100% ವೆಜ್ ಬಟರ್ ಚಿಕನ್’ ಖಾದ್ಯದ ಚಿತ್ರವೊಂದು ಆನ್ಲೈನ್‌ನಲ್ಲಿ ಸುದ್ದಿಯಾಗಿದೆ. ಹೌದು! ನೀವು ಓದಿದ್ದು ಸರಿಯಾಗೇ ಇದೆ – ’100% ವೆಜ್ ಬಟರ್ ಚಿಕನ್’. ಅಪ್ಲೋಡ್ ಆದಾಗಿನಿಂದ ಈ ಪೋಸ್ಟ್ ಅನ್ನು 35 ಸಾವಿಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
“ನೀವೊಬ್ಬ ಶಾಖಾಹಾರಿ ಎಂದು ಹೇಳಿಕೊಳ್ಳಬೇಕು, ಹಾಗೇ ಈ ವಿಚಾರದಲ್ಲಿ ಸೇಫಾಗಿರಲು ಇಚ್ಛಿಸುತ್ತೀರಿ ಎಂದಾಗ,” ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದಾರೆ.
“ಮೀನು ಹಾಗೂ ಕೋಳಿಯನ್ನು ಶಾಕಾಹಾರಿ ಎಂದು ಪರಿಗಣಿಸೋಣ. ಕೇವಲ ಕೆಂಪು ಮಾಂಸಗಳು ಮಾತ್ರವೇ ಕೆಂಪು ಐಕಾನ್‌ಗೆ ಪರಿಗಣಿಸಲ್ಪಡಬೇಕು. ಮಾಂಸಾಹಾರವನ್ನು ’ಮಾಂಸ’ ಎಂದೂ ಶಾಖಾಹಾರವನ್ನು ’ಮಾಂಸೇತರ’ ಎಂದೂ ಮರುಬ್ರಾಂಡ್ ಮಾಡೋಣ,” ಎಂದು ಮತ್ತೊಬ್ಬ ವ್ಯಕ್ತಿ ಬರೆದಿದ್ದಾರೆ.
ಇಂಥದ್ದೇ ಸ್ಕ್ರೀನ್‌ಶಾಟ್ ಒಂದನ್ನು ಶೇರ್ ಮಾಡಿದ ಮತ್ತೊಬ್ಬ ನೆಟ್ಟಿಗ, ’ವೆಜ್ ತವಾ ಚಿಕನ್’ ಪರಿಚಯ ಮಾಡಿಸಿದ್ದಾರೆ.