alex Certify Shocking: ಇಲ್ಲಿ ನಡೆಯುತ್ತೆ ಮಹಿಳೆಯರ ಮಾರಾಟ; ರೇಟ್ ಫಿಕ್ಸ್ ಮಾಡಿ ಕೊಂಡುಕೊಳ್ತಾರೆ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಇಲ್ಲಿ ನಡೆಯುತ್ತೆ ಮಹಿಳೆಯರ ಮಾರಾಟ; ರೇಟ್ ಫಿಕ್ಸ್ ಮಾಡಿ ಕೊಂಡುಕೊಳ್ತಾರೆ ಜನ…!

ಭಾರತದಲ್ಲಿ ಮಹಿಳೆಯರ ಸುರಕ್ಷತೆಯು ಪ್ರಶ್ನಾರ್ತಕವಾಗಿರುವ ಸಮಯದಲ್ಲಿ, ದೇಶದ ಕೆಲವು ಭಾಗಗಳಲ್ಲಿ ಅನುಸರಿಸುತ್ತಿರುವ ಅನಿಷ್ಟ ಪದ್ಧತಿಗಳು ಮಹಿಳೆಯರನ್ನು ವಿಶೇಷವಾಗಿ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತಿವೆ.

ಮಧ್ಯಪ್ರದೇಶದ ಶಿವಪುರಿ ಗ್ರಾಮದಲ್ಲಿ ಪ್ರಚಲಿತದಲ್ಲಿರುವ ‘ಧಾಡಿಚಾ’ ಎಂಬ ಅಂತಹ ಹೀನ ಅಭ್ಯಾಸವಿದೆ. ಇಲ್ಲಿ ಮಹಿಳೆಯರನ್ನು ಮಾರುಕಟ್ಟೆಯ ಸರಕುಗಳಂತೆ ಕೊಳ್ಳಲಾಗುತ್ತದೆ ಮತ್ತು ಮಾರಲಾಗುತ್ತದೆ.

‘ಡೀಲ್’ಗಳ ಆಧಾರದ ಮೇಲೆ ಮಹಿಳೆಯರನ್ನು ‘ಬಾಡಿಗೆ’ ಪಡೆಯಲು ದೂರದೂರುಗಳಿಂದ ಜನರು ಈ ಮಾರುಕಟ್ಟೆಗೆ ಬರುತ್ತಾರೆ. ಬಾಡಿಗೆ ಅವಧಿಯನ್ನು ಒಪ್ಪಂದದ ನಿಯಮಗಳಿಂದ ನಿರ್ಧರಿಸಲಾಗುತ್ತದೆ. ಪುರುಷರು ತಾವು ಆಯ್ಕೆ ಮಾಡಿದ ಯಾವುದೇ ಮಹಿಳೆಗೆ ಬೆಲೆಯನ್ನು ನಿಗದಿಪಡಿಸಿದ ನಂತರ ಅವಳನ್ನು ನೋಡಿ , ಒಪ್ಪಿದ ಮೊತ್ತವನ್ನು ಪಾವತಿಸಿದ ನಂತರ ಕರೆದುಕೊಂಡು ಹೋಗುತ್ತಾರೆ. ಸಾಮಾನ್ಯವಾಗಿ ಬಡ ಕುಟುಂಬಗಳು ತಮ್ಮ ಮಹಿಳಾ ಸದಸ್ಯರನ್ನು ಮಾರಾಟ ಮಾಡಲು ಇಲ್ಲಿವೆ ಬರುತ್ತವೆ.

ಪುರುಷರು ವಿವಿಧ ಕಾರಣಗಳಿಗಾಗಿ ಈ ಮಾರುಕಟ್ಟೆಯಿಂದ ಮಹಿಳೆಯರನ್ನು ಖರೀದಿಸುತ್ತಾರೆ. ಕೆಲವರು ತಮ್ಮ ಮನೆಗಳಲ್ಲಿರುವ ವೃದ್ಧರನ್ನು ನೋಡಿಕೊಳ್ಳಲು ಖರೀದಿಸಿದರೆ, ಇನ್ನು ಕೆಲವರು ಸೂಕ್ತ ವಧು ಸಿಗದ ಕಾರಣ ಖರೀದಿ ಮಾಡುತ್ತಾರೆ. ವರದಿಗಳ ಪ್ರಕಾರ, ‘ಡೀಲ್’ ಅನ್ನು ನಿರಾಕರಿಸುವ ಹಕ್ಕು ಮಹಿಳೆಯರಿಗೆ ಇದೆ.

ಈ ಮಾರುಕಟ್ಟೆಯಿಂದ ಖರೀದಿಸಿದ ಯಾವುದೇ ಮಹಿಳೆಗೆ ಔಪಚಾರಿಕ ಒಪ್ಪಂದದ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ಕನಿಷ್ಠ 15,000 ರೂ.ಗಳಿಂದ ಲಕ್ಷಗಳವರೆಗೆ ಅವರ ಬೆಲೆ ಹೋಗಬಹುದು. ಮಹಿಳೆಯರಿಗಿಂತ ಕನ್ಯೆಯರು ಹೆಚ್ಚಿನ ಬೆಲೆಯನ್ನು ಪಡೆಯುತ್ತಾರೆ. ಒಬ್ಬ ಪುರುಷನು ಮಹಿಳೆಯನ್ನು ಒಂದು ವರ್ಷ ಅಥವಾ ಕೆಲವು ತಿಂಗಳುಗಳಿಗೆ ಬಾಡಿಗೆಗೆ ಪಡೆಯಬಹುದು. ವರದಿಯಂತೆ 10 ರೂ.ನಿಂದ ಆರಂಭವಾಗುವ ಸ್ಟಾಂಪ್ ಪೇಪರ್ ಸೇರಿದಂತೆ ಕಾಗದ ಪತ್ರಗಳಲ್ಲಿ ಅಗ್ರಿಮೆಂಟ್ ಸಿದ್ಧಪಡಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...