ಬಾಂಬೆ ಶೇರು ಮಾರುಕಟ್ಟೆಯಲ್ಲಿ ರೈಲು ವಿಕಾಸ ನಿಗಮದ ಶೇರುಗಳ ಬೆಲೆಗಳಲ್ಲಿ ಸತತ ಐದು ಬಾರಿ ಏರಿಕೆ ಕಂಡು ಬಂದಿದ್ದು, ಗುರುವಾರದ ವಹಿವಾಟಿನಂತ್ಯಕ್ಕೆ 103.17/ ಶೇರಿನ ಮಟ್ಟ ತಲುಪಿದೆ.
ಕಳೆದ ಐದು ಸೆಶನ್‌ಗಳಲ್ಲಿ ಮೇಲ್ಕಂಡ ಶೇರಿನ ಮೌಲ್ಯದಲ್ಲಿ 50%ನಷ್ಟು ವರ್ಧನೆಯಾಗಿದೆ. ಏಪ್ರಿಲ್ 21ರಂದು ಸಿಮೆನ್ಸ್ ಹಾಗೂ ರೈಲು ವಿಕಾಸ ನಿಗಮದ ಒಕ್ಕೂಟವು ಗುಜರಾತ್ ಮೆಟ್ರೋ ರೈಲು ಕಾರ್ಪೋರೇಷನ್‌ನ ಎರಡು ಹೊಸ ಆರ್ಡರ್‌ಗಳನ್ನು ಪಡೆದ ಬಳಿಕ, ಭಾರತೀಯ ರೈಲ್ವೇ ಮಾಲೀಕತ್ವದ ಸಾರ್ವಜನಿಕ ಉದ್ದಿಮೆಯ ಶೇರು ಮೌಲ್ಯದಲ್ಲಿ ಈ ಬದಲಾವಣೆ ಕಂಡು ಬಂದಿದೆ.
ಬುಧವಾದರಂದು 114.62/ಶೇರಿನ ಬೆಲೆ ತಲುಪಿದ್ದ ರೈಲು ವಿಕಾಸ ನಿಗಮದ ಮೌಲ್ಯದಲ್ಲಿ ಗುರುವಾರದಂದು ಅಲ್ಪ ಕುಸಿತ ಕಂಡು ಬಂದಿದೆ.
ಕಳೆದ ಮೂರು ವರ್ಷಗಳಲ್ಲಿ ಆರ್‌ವಿಎನ್‌ಎಲ್ ತನ್ನ ಹೂಡಿಕೆದಾರರಿಗೆ ಭಾರೀ ರಿಟರ್ನ್ಸ್ ಕೊಡುತ್ತಾ ಬಂದಿದೆ. ಕಳೆದ ಒಂದು ವರ್ಷದಿಂದ ಆರ್‌ವಿಎನ್‌ಎಲ್‌ನ ಶೇರುಗಳ ಮೌಲ್ಯ ದುಪ್ಪಟ್ಟಾಗಿದೆ. ಮೂರು ವರ್ಷಗಳಲ್ಲಿ ಆರ್‌ವಿಎನ್‌ಎಲ್ ಶೇರಿನ ಮೌಲ್ಯದಲ್ಲಿ 500%ನಷ್ಟು ಏರಿಕೆ ಕಂಡು ಬಂದಿದೆ. ಆರ್‌ವಿಎನ್‌ಎಲ್‌ನ ಪ್ರಸಕ್ತ ಮಾರುಕಟ್ಟೆ ಮೌಲ್ಯವು 21,511 ಕೋಟಿ ರೂ.ಗಳಷ್ಟಿದೆ.