ಅತಿದೊಡ್ಡ ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ಒಂದಾದ ʼಪುಷ್ಪಾ:ದಿ ರೈಸ್ʼ ಸ್ಮರಣೀಯ ಸಂಭಾಷಣೆಗಳೊಂದಿಗೆ ಪ್ರೇಕ್ಷಕರಲ್ಲಿ ಆಳವಾದ ಛಾಪು ಮೂಡಿಸಿದೆ. ಕಥಾನಾಯಕ ಪುಷ್ಪಾ, ಶ್ರೀಗಂಧದ ಮರವನ್ನು ಕಳ್ಳಸಾಗಣೆ ಮಾಡುವ ಮೂಲಕ ಸಂಪತ್ತನ್ನು ಸಂಗ್ರಹಿಸುತ್ತಾನೆ. ಇತರರನ್ನು ಮುನ್ನಡೆಸುತ್ತಾನೆ.
ಆದ್ರೆ ನಿಜ ಜೀವನದ‘ಪುಷ್ಪಾ’ಹಾಗೆ ಮಾಡಲು ವಿಫಲವಾಗಿದ್ದಾನೆ. ಪಶ್ಚಿಮ ಬಂಗಾಳದ ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ತೇಗದ ಮರದ ಕಳ್ಳಸಾಗಣೆ ಮಾಡುತ್ತಿದ್ದಾಗ ಅದನ್ನು ಪತ್ತೆಹಚ್ಚಿದ ಬಗ್ಗೆ ತಿಳಿಸಿದ್ದಾರೆ. ಸ್ಲೀಪರ್ ಬಸ್ನಲ್ಲಿ ತೇಗದ ಮರವನ್ನು ಕಳ್ಳಸಾಗಣೆ ಮಾಡುತ್ತಿದ್ದಾಗ, ಮಂಗಳವಾರ ಮುಂಜಾನೆ 3:30 ಕ್ಕೆ ವಾಹನವನ್ನು ತಡೆದಿದ್ದಾಗಿ ಅಧಿಕಾರಿ ಹೇಳಿದ್ರು. ಆದರೆ, ಘಟನೆ ನಡೆದ ಸ್ಥಳವನ್ನು ಮಾತ್ರ ಕಸ್ವಾನ್ ಬಹಿರಂಗಪಡಿಸಿಲ್ಲ.
“ಒಂದು ವೋಲ್ವೋ ಸ್ಲೀಪರ್ ಬಸ್ ಅನ್ನು ತೇಗದ ಮರದ ಕಳ್ಳಸಾಗಣೆಗೆ ಬಳಸಲಾಗುತ್ತಿದೆ ಎಂದು ಊಹಿಸಿಕೊಳ್ಳಿ. ಈ ಪುಷ್ಪಾ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುತ್ತಿದ್ದ. ಆದರೆ, ನಿಜವಾದ ಪೊಲೀಸರು ಕಳ್ಳಸಾಗಣೆಯನ್ನು ತಡೆದಿದ್ದಾರೆ ಎಂದು ಕಸ್ವಾನ್ ಅವರು ಬಸ್ ಮತ್ತು ಕಳ್ಳಸಾಗಣೆ ಮಾಡಲಾದ ಸರಕುಗಳ ಫೋಟೋಗಳೊಂದಿಗೆ ಟ್ವೀಟ್ ಮಾಡಿದ್ದಾರೆ. ಕಸ್ವಾನ್ ಅವರ ಟ್ವೀಟ್ ಗೆ ತಮಾಷೆಯ ಪ್ರತಿಕ್ರಿಯೆಗಳು ಮತ್ತು ಮೆಚ್ಚುಗೆಯ ಸುರಿಮಳೆ ವ್ಯಕ್ತವಾಗಿದೆ.
https://twitter.com/Psuedoshadow/status/1544673502510194688?ref_src=twsrc%5Etfw%7Ctwcamp%5Etweetembed%7Ctwterm%5E1544673502510194688%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fthis-pushpa-was-underestimating-our-teams-ifs-officers-sarcastic-remark-on-timber-smugglers-8015122%2F