ಕಪ್ಪು ಕಲೆಗಳು ಅಂದ್ರೆ ಬ್ಲಾಕ್ ಹೆಡ್ಸ್ ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಕೆಲ ಮಹಿಳೆಯರ ಮೂಗಿನ ಮೇಲೆ ಈ ಕಪ್ಪು ಕಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
ಆಯ್ಲಿ ಚರ್ಮದಿಂದಾಗಿ ಮುಖದ ರೋಮ ರಂಧ್ರ ತೆರೆದುಕೊಳ್ಳುತ್ತದೆ. ಇದ್ರಲ್ಲಿ ಧೂಳು, ಕೊಳಕು ಸೇರಿ ಬ್ಲಾಕ್ ಹೆಡ್ಸ್ ಕಾಡಲು ಶುರುವಾಗುತ್ತದೆ.
ಈ ಬ್ಲಾಕ್ ಹೆಡ್ಸ್ ಸಮಸ್ಯೆಯನ್ನು ನೀವು ಮನೆಯಲ್ಲಿಯೇ ಪರಿಹರಿಸಿಕೊಳ್ಳಬಹುದು. ಕಾಫಿ ಪುಡಿ ನಿಮ್ಮ ಸಮಸ್ಯೆಗೆ ಮದ್ದಾಗಬಲ್ಲದು.
ಈ ಪೇಸ್ಟ್ ಗೆ ಬೇಕಾಗುವ ಸಾಮಗ್ರಿ : ಎರಡು ಚಮಚ ಮೊಸರು, ಒಂದು ದೊಡ್ಡ ಚಮಚ ಕಾಫಿ ಪುಡಿ, ಒಂದು ಚಮಚ ಕಡಲೆ ಹಿಟ್ಟು.
ಮೊದಲು ಮೊಸರು, ಕಾಫಿ ಪುಡಿ, ಕಡಲೆ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಮಿಕ್ಸ್ ಮಾಡಿ. ದಪ್ಪದಾದ ಪೇಸ್ಟ್ ತಯಾರಿಸಿಕೊಂಡು ಅದನ್ನು ಬ್ಲಾಕ್ ಹೆಡ್ಸ್ ಇರುವ ಜಾಗಕ್ಕೆ ಹಚ್ಚಿಕೊಳ್ಳಿ. ನಂತ್ರ ಕೈನಿಂದ ನಿಧಾನವಾಗಿ ಮಸಾಜ್ ಮಾಡಿ. ನಂತ್ರ 2 ನಿಮಿಷ ಬಿಟ್ಟು ಮುಖವನ್ನು ನೀರಿನಲ್ಲಿ ತೊಳೆದುಕೊಳ್ಳಿ. ಇದಾದ ನಂತ್ರ ಮುಖಕ್ಕೆ ಕ್ರೀಂ ಹಚ್ಚಿ. ವಾರದಲ್ಲಿ ಒಂದರಿಂದ ಎರಡು ಬಾರಿ ಹೀಗೆ ಮಾಡಿದ್ರೆ ನಿಮ್ಮ ಬ್ಲಾಕ್ ಹೆಡ್ಸ್ ದೂರವಾಗುತ್ತೆ.