ಸಾಮಾನ್ಯವಾಗಿ ಗಾಯಗಳಾದಾಗ ಚಿಕಿತ್ಸೆ ನೀಡಲು ಎಲ್ಲರ ಮನೆಯಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಟ್ಟುಕೊಳ್ಳುತ್ತೇವೆ. ಆದರೆ ಕೆಲವರ ಮನೆಯಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಲ್ಲದಿದ್ದರೆ ಅದರ ಬದಲು ಚಿಕಿತ್ಸೆ ನೀಡಲು ಮನೆಯಲ್ಲಿಯೇ ಸಿಗುವ ಈ ಪದಾರ್ಥಗಳನ್ನು ಬಳಸಬಹುದು.
*ಆಪಲ್ ಸೈಡರ್ ವಿನೆಗರ್ : ಜೇನುನೋಣ ಕಚ್ಚಿದಾಗ, ಸೊಳ್ಳೆ ಕಡಿತದ ತುರಿಕೆಗೆ, ಗಂಟಲು ನೋವಿಗೆ ಪ್ರಥಮ ಚಿಕಿತ್ಸೆಯಾಗಿ ಇದನ್ನು ಬಳಸಬಹುದು.
*ಅಡುಗೆ ಸೋಡಾ : ಚರ್ಮದ ಸಮಸ್ಯೆಗಳಿಗೆ, ಹೊಟ್ಟೆಯ ಆಮ್ಲೀಯತೆಗೆ, ವಾಯು ನಿವಾರಣೆಗೆ ಅಡುಗೆ ಸೋಡಾ ಬಳಸಬಹುದು.
*ಬೆಳ್ಳುಳ್ಳಿ : ಕೀಟಗಳ ಕಡಿತಕ್ಕೆ ಪ್ರಥಮ ಚಿಕಿತ್ಸೆಯಾಗಿ ಇದನ್ನು ಬಳಸಬಹುದು. ಹಾಗೇ ಗ್ರಾಮೀಣ ಪ್ರದೇಶಗಳಲ್ಲಿ ಹುಳುಕು, ಸಣ್ಣ ಏಟು, ಗಜಕರ್ಣಕ್ಕೆ ಚಿಕಿತ್ಸೆ ನೀಡಲು ಬೆಳ್ಳುಳ್ಳಿ ರಸ ಮತ್ತು ಉಪ್ಪಿನ ಮಿಶ್ರಣವನ್ನು ಬಳಸುತ್ತಾರೆ.
*ಜೇನುತುಪ್ಪ : ಇದು ಉರಿಯೂತ, ಬ್ಯಾಕ್ಟೀರಿಯಾ ವಿರೋಧಿ ಗುಣ ಲಕ್ಷಣಗಳನ್ನು ಹೊಂದಿದ್ದು, ಇದನ್ನು ಗಾಯಗಳಿಗೆ ಪ್ರಥಮ ಚಿಕಿತ್ಸೆಯಾಗಿ ಬಳಸಬಹುದು. ಇದರಿಂದ ಗಾಯ ಬೇಗ ವಾಸಿಯಾಗುತ್ತದೆ.
*ಅರಶಿನ : ಇದು ನಂಜುನಿವಾರಕ ಗುಣಗಳನ್ನು ಹೊಂದಿದೆ. ಇದನ್ನು ಕೂಡ ಇದನ್ನು ಗಾಯಗಳಿಗೆ ಪ್ರಥಮ ಚಿಕಿತ್ಸೆಯಾಗಿ ಬಳಸಬಹುದು. ಇದರಿಂದ ಗಾಯ ಮತ್ತು ಅದರ ನೋವು ಬೇಗ ವಾಸಿಯಾಗುತ್ತದೆ.