ನೀವು ಆರೋಗ್ಯವಾಗಿರಲು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಬೇಕು. ಅದರಂತೆ ಸ್ವಚ್ಛತೆಯ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕು. ಕೆಲವರು ಮಲಗುವಾಗ ಬಳಸುವಂತಹ ದಿಂಬಿನ ಕವರ್ ಅನ್ನು ಅನೇಕ ದಿನಗಳ ಕಾಲ ಸ್ವಚ್ಛ ಮಾಡದೇ ಬಳಸುತ್ತಾರೆ. ಆದರೆ ಇದು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ನೀವು ಹಲವು ದಿನಗಳ ಕಾಲ ದಿಂಬಿನ ಕವರ್ ಅನ್ನು ಒಗೆಯದೇ ಬಳಸಿದರೆ ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತದೆಯಂತೆ ಇದು ಸೋಂಕಿಗೆ ಕಾರಣವಾಗುತ್ತದೆಯಂತೆ. ಇದರಿಂದ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾಗುತ್ತಾನಂತೆ.
ದಿಂಬಿನ ಕವರ್ ನಲ್ಲಿ ಧೂಳು ಕೊಳೆ ಸಂಗ್ರಹವಾಗುವ ಕಾರಣ ಅದನ್ನುಹಲವು ದಿನಗಳ ಕಾಲ ಬಳಸಿದರೆ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತದೆಯಂತೆ. ಇದರಿಂದ ಶ್ವಾಸಕೊಶ ಹಾನಿಗೊಳಗಾಗುತ್ತದೆಯಂತೆ.
ಒಗೆಯದ ದಿಂಬಿನ ಕವರ್ ನಲ್ಲಿ ಬ್ಯಾಕ್ಟೀರಿಯಾಗಳಿರುತ್ತದೆ. ಇದು ಮುಖದ ಚರ್ಮಕ್ಕೆ ತಗುಲಿದರೆ ಮುಖದಲ್ಲಿ ಒಡವೆಗಳು, ದದ್ದುಗಳ ಸಮಸ್ಯೆ ಕಾಡುತ್ತದೆಯಂತೆ. ಅಲ್ಲದೇ ಈ ದಿಂಬಿನ ಮೇಲೆ ತಲೆಯಿಟ್ಟು ಮಲಗುವುದರಿಂದ ಕೂದಲುಗಳು ಹಾನಿಗೊಳಗಾಗುತ್ತದೆಯಂತೆ.
ಹಾಗಾಗಿ ದಿಂಬಿನ ಕವರ್ ಅನ್ನು ವಾರದಲ್ಲಿ ಒಮ್ಮೆಯಾದರೂ ಸ್ವಚ್ಛಗೊಳಿಸಿ ಬಳಸಿದರೆ ಉತ್ತಮ.