alex Certify ವಿಟಮಿನ್ ಇ ಕೊರತೆಯಿಂದಾಗಿ ಎದುರಾಗುತ್ತೆ ಈ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಟಮಿನ್ ಇ ಕೊರತೆಯಿಂದಾಗಿ ಎದುರಾಗುತ್ತೆ ಈ ಸಮಸ್ಯೆ

ನಾವು ದಿನನಿತ್ಯ ಸೇವಿಸುವ ಆಹಾರದ ಮೂಲಕ ನಮಗೆ ಅಗತ್ಯವಾದ ವಿಟಮಿನ್ ಸಿಗುತ್ತದೆ. ಆಹಾರದಲ್ಲಿ ವಿಟಮಿನ್ ಅಂಶಗಳ ಕೊರತೆಯು ನಾನಾ ರೋಗಗಳಿಗೆ ಕಾರಣವಾಗಬಹುದು. ದೇಹವನ್ನು ಆರೋಗ್ಯಕರವಾಗಿ  ಇರಿಸಿಕೊಳ್ಳಲು ಹಲವು ವಿಟಮಿನ್ ಗಳು ಮತ್ತು ಮಿನರಲ್ ಗಳು ಅಗತ್ಯ.

ಇವುಗಳಲ್ಲಿ ವಿಟಮಿನ್ ಇ  ಕೂಡ ಒಂದು. ವಿಟಮಿನ್ ಇ ದೇಹಕ್ಕೆ ಅಗತ್ಯ ಶಕ್ತಿ ನೀಡುವುದರ ಜೊತೆಗೆ ಚರ್ಮ ಮತ್ತು ಕೂದಲಿಗೆ ಹೆಚ್ಚು ಪ್ರಯೋಜನಕಾರಿ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ.

ಆಹಾರ ತಜ್ಞರ ಪ್ರಕಾರ, ವಿಟಮಿನ್ ಇ ಸುಲಭವಾಗಿ ಕರಗುತ್ತದೆ. ವಿಟಮಿನ್ ಇ ಕೊರತೆಯಿಂದಾಗಿ ಸ್ನಾಯು ನೋವು, ಹೆಚ್ಚಿನ ಆಯಾಸ ಇತ್ಯಾದಿ ಕಾಡುತ್ತದೆ.

ವಿಟಮಿನ್ ಇ ಕೊರತೆಯ ಲಕ್ಷಣಗಳು :  ಹಠಾತ್ ಸ್ನಾಯು ದೌರ್ಬಲ್ಯ, ದೃಷ್ಟಿ ದೋಷ, ಕೂದಲು ಉದುರುವಿಕೆ ಹಾಗೂ ಪಚನಕ್ರಿಯೆಗೆ ಸಂಬಂಧಿಸಿದ ಸಮಸ್ಯೆ

ನಮ್ಮ ದೇಹಕ್ಕೆ ಸಾಕಷ್ಟು ವಿಟಮಿನ್ ಇ ಅಂಶ ಸಿಗದೆ ಇದ್ದಾಗ, ಅನೇಕ ರೋಗಗಳ ಅಪಾಯವು ಹೆಚ್ಚಾಗುತ್ತದೆ. ದೀರ್ಘಕಾಲಿನ ವಿಟಮಿನ್ ಇ ಕೊರತೆಯು ಕ್ಯಾನ್ಸರ್ ಬರುವ ಅಪಾಯವನ್ನು ಹೆಚ್ಚಿಸುತ್ತದೆ.

ರಕ್ತದಲ್ಲಿನ ವಿಟಮಿನ್ ಇ ಕೊರತೆಯಿಂದಾಗಿ ಕೆಂಪು ರಕ್ತ ಕಣಗಳ ಪ್ರಮಾಣವು ಕಡಿಮೆಯಾಗಿ ರಕ್ತಹೀನತೆಗೆ  ಕಾರಣವಾಗುತ್ತದೆ. ವಿಟಮಿನ್ ಇ ಕೊರತೆಯಿಂದ ಕೊಲೆಸ್ಟ್ರಾಲ್ ಸಹ ನಿಯಂತ್ರಣದಲ್ಲಿರುವುದಿಲ್ಲ. ಕೂದಲು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ದೇಹದಲ್ಲಿ ವಿಟಮಿನ್ ಇ ಕೊರತೆಯು ಮಾನಸಿಕ ಅಸ್ವಸ್ಥತೆಗಳನ್ನು ಉಂಟುಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.

ವಿಟಮಿನ್ ಇ ಆಹಾರ: ಸಸ್ಯಜನ್ಯ ಎಣ್ಣೆ, ಧಾನ್ಯಗಳು, ಮಾಂಸ, ಮೊಟ್ಟೆ, ಹಣ್ಣುಗಳು, ತರಕಾರಿಗಳು ಮತ್ತು ಗೋಧಿಯಂತಹ ಆಹಾರಗಳು.

ಪ್ರೊಸ್ಟಗ್ಲಾಂಡಿನ್‌ಗಳು ಎಂಬ ಹಾರ್ಮೋನ್‌ಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವನ್ನು ವಿಟಮಿನ್ ಇ ವಹಿಸುತ್ತದೆ. ಈ ಹಾರ್ಮೋನುಗಳು ರಕ್ತದೊತ್ತಡ ಮತ್ತು ಸ್ನಾಯುವಿನ ಸಂಕುಚನದಂತಹ ಅನೇಕ ದೈಹಿಕ ಪ್ರಕ್ರಿಯೆಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತವೆ.

ವಿಟಮಿನ್ ಇ  ಆಹಾರಗಳಾದ ಬಾದಾಮಿ, ವಾಲ್ನಟ್, ಕಡಲೆಕಾಯಿ ಸೂರ್ಯಕಾಂತಿ ಬೀಜಗಳು, ಸೊಪ್ಪು ಕೋಸುಗಡ್ಡೆ, ಸೋಯಾಬೀನ್ ಸೇವಿಸುವ ಮೂಲಕ ದೇಹದ ವಿಟಮಿನ್ ಇ ಸಮತೋಲನದಲ್ಲಿ ಇರಿಸಿಕೊಳ್ಳಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...