ನಿದ್ರೆಯನ್ನು ಅರ್ಧ ಸಾವು ಎಂದು ಶಾಸ್ತ್ರಗಳು ಪರಿಗಣಿಸಿವೆ. ನಿದ್ರೆ ನಂತ್ರ ಯಾವುದೇ ಶುಭ ಕೆಲಸಗಳನ್ನು ಸ್ನಾನ ಮಾಡದೆ ಮಾಡಿದಲ್ಲಿ ಅದು ಅಶುಭ ಫಲವನ್ನು ನೀಡುತ್ತದೆ.
ಸ್ನಾನಕ್ಕಿಂತ ಮೊದಲು ನಿತ್ಯ ಕರ್ಮಗಳನ್ನು ಬಿಟ್ಟು ಮತ್ಯಾವ ಕೆಲಸವನ್ನು ಮಾಡುವುದೂ ಸೂಕ್ತವಲ್ಲ. ಸ್ನಾನಕ್ಕಿಂತ ಮೊದಲು ಹೂ ಕೀಳುವುದು, ತುಳಸಿ ಗಿಡದ ಸ್ಪರ್ಶ ಮಾಡುವುದರಿಂದ ಹಿಡಿದು ಯಾವುದೇ ಪುಣ್ಯದ ಕೆಲಸಗಳನ್ನು ಮಾಡಬಾರದು.
ಅಶುದ್ಧವಾಗಿರುತ್ತದೆ. ಹಾಗಾಗಿ ನಿದ್ರೆ ಮಾಡಿ ಎದ್ದ ತಕ್ಷಣ ಸ್ನಾನ ಮಾಡಿ ಉಳಿದ ಕೆಲಸ ಮಾಡಬೇಕೆಂದು ಪುರಾಣಗಳಲ್ಲಿ ಹೇಳಲಾಗಿದೆ.
ಸ್ನಾನಕ್ಕಿಂತ ಮೊದಲು ಆಹಾರ ಸೇವನೆ ಮಾಡುವುದು ನಿಶಿದ್ಧ. ಶಾಸ್ತ್ರಗಳ ಪ್ರಕಾರ ಸ್ನಾನಕ್ಕಿಂತ ಮೊದಲು ಆಹಾರ ಸೇವನೆ ಮಾಡುವುದು ರಾಕ್ಷಸರ ಲಕ್ಷಣ. ಈಗಿನ ಕಾಲದಲ್ಲಿ ಶಾಸ್ತ್ರ, ಪುರಾಣಗಳನ್ನು ಜನರು ನಂಬುವುದಿಲ್ಲ. ಆದ್ರೆ ವೈಜ್ಞಾನಿಕವಾಗಿ ಕೂಡ ಆಹಾರ ಸೇವನೆ ಮಾಡುವ ಮೊದಲು ಸ್ನಾನ ಮಾಡುವುದು ಒಳ್ಳೆಯದು.
ಸ್ನಾನ ಮಾಡುವುದರಿಂದ ಶರೀರ ಶುದ್ಧವಾಗುತ್ತದೆ. ಹಿಂದಿನ ದಿನದ ಸುಸ್ತು, ಆಯಾಸ ಸ್ನಾನ ಮಾಡುವುದರಿಂದ ಕಡಿಮೆಯಾಗಿ ಹಿತವೆನಿಸುತ್ತದೆ. ಮನಸ್ಸು ಉಲ್ಲಾಸಿತವಾಗುವ ಜೊತೆಗೆ ತಾಜಾತನದ ಅನುಭವವಾಗುತ್ತದೆ. ಸ್ನಾನದ ನಂತ್ರ ಆಹಾರ ಸೇವನೆ ಮಾಡುವುದರಿಂದ ಉಲ್ಲಾಸಭರಿತ ದೇಹಕ್ಕೆ ಶಕ್ತಿ ಬರುತ್ತದೆ.
ಸ್ನಾನಕ್ಕಿಂತ ಮೊದಲು ಆಹಾರ ಸೇವನೆ ಮಾಡಿದಲ್ಲಿ ದೇಹ ಜೀರ್ಣಕ್ರಿಯೆ ಶುರುಮಾಡುತ್ತದೆ. ಈ ವೇಳೆ ನಾವು ಸ್ನಾನ ಮಾಡಿದ್ರೆ ದೇಹ ತಣ್ಣಗಾಗುತ್ತದೆ. ಇದ್ರಿಂದ ದೇಹದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಕರುಳು ದುರ್ಬಲವಾಗುತ್ತದೆ. ಅನೇಕ ರೋಗಗಳು ದೇಹವನ್ನು ಸುತ್ತಿಕೊಳ್ಳುತ್ತವೆ. ಹಾಗಾಗಿ ಸ್ನಾನಕ್ಕಿಂತ ಮೊದಲು ಆಹಾರ ಸೇವನೆ ಮಾಡುವುದನ್ನು ನಿಷೇಧಿಸಲಾಗಿದೆ. ಅವಶ್ಯವೆನಿಸಿದಲ್ಲಿ ಕಬ್ಬಿನ ಹಾಲು, ನೀರು, ಹಾಲು ಅಥವಾ ಹಣ್ಣಿನ ರಸವನ್ನು ಸೇವನೆ ಮಾಡಬಹುದು. ಇದ್ರಲ್ಲಿ ನೀರಿನಂಶ ಜಾಸ್ತಿ ಇರುವುದರಿಂದ ಬೇಗ ಜೀರ್ಣವಾಗುತ್ತದೆ.