ಕಹಿ ಬೇವಿನ ಸೊಪ್ಪು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಹಲವು ಕಾಯಿಲೆಗಳ ನಿವಾರಣೆಗೆ ಬಳಸುತ್ತಾರೆ. ಇದು ನಂಜು ನಿವಾರಕ ಗುಣಗಳನ್ನು ಹೊಂದಿದೆ, ಇದು ರೋಗಾಣುಗಳ ವಿರುದ್ಧ ಹೋರಾಡುವಂತಹ ಗುಣಗಳನ್ನು ಹೊಂದಿದೆ. ಆದರೆ ಇದನ್ನು ಅತಿಯಾಗಿ ಬಳಸಿದರೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
*ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ಸಕ್ಕರೆ ಮಟ್ಟ ತುಂಬಾ ಕಡಿಮೆಯಾಗಿ ದೇಹವು ಶಕ್ತಿಯನ್ನು ಕಳೆದುಕೊಳ್ಳಬಹುದು.
*ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ನಿಜ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಸೇವಿಸಿದರೆ ಇದು ರೋಗ ನಿರೋಧಕ ಶಕ್ತಿಯನ್ನು ಪ್ರಚೋದಿಸುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತದೆ.
* ಬೇವಿನ ಸೊಪ್ಪನ್ನು ಅತಿಯಾಗಿ ಸೇವಿಸಿದರೆ ಇದು ಮೂತ್ರಪಿಂಡದ ಮೇಲೆ ಹಾನಿಯನ್ನುಂಟು ಮಾಡುತ್ತದೆ ಎಂಬುದನ್ನು ಆರೋಗ್ಯ ತಜ್ಞರು ಕಂಡುಕೊಂಡಿದ್ದಾರೆ ಎನ್ನಲಾಗಿದೆ.
*ಇದನ್ನು ಅತಿಯಾಗಿ ಸೇವಿಸಿದರೆ ಹೊಟ್ಟೆಯ ಕಿರಿಕಿರಿ ಮತ್ತು ಚರ್ಮದ ಅಲರ್ಜಿಗಳು ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.