ಅನಿದ್ರೆ ನಿಮ್ಮ ದಿನಚರಿ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ನಿಮ್ಮ ಜೀರ್ಣಕ್ರಿಯೆಯಿಂದ ಹಿಡಿದು ನೆನಪಿನ ಶಕ್ತಿ, ತೂಕ, ಲೈಂಗಿಕ ಜೀವನ ಸೇರಿದಂತೆ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಅನಿದ್ರೆ ಅಪಘಾತಕ್ಕೆ ಕಾರಣವಂತೆ. ಸಂಶೋಧನೆಯೊಂದು ಈ ವಿಷ್ಯವನ್ನು ಹೇಳಿದೆ. ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವುದಕ್ಕಿಂತ ಅನಿದ್ರೆಯಲ್ಲಿ ವಾಹನ ಚಲಾಯಿಸುವುದು ಅಪಾಯಕಾರಿ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.
ಅನಿದ್ರೆ ನಮ್ಮ ಯೋಚನೆ ಹಾಗೂ ಅರ್ಥ ಮಾಡಿಕೊಳ್ಳುವ ಶಕ್ತಿ ಮೇಲೆ ಪ್ರಭಾವ ಬೀರುತ್ತದೆ. ನಿದ್ರಾಹೀನತೆಯಿಂದಾಗಿ ಗಮನ, ಜಾಗೃತಿ, ತರ್ಕ ಶಕ್ತಿ ಕಡಿಮೆಯಾಗುತ್ತದೆ.
ನಿದ್ರಾಹೀನತೆಯಿಂದ ಅಪಾಯಕಾರಿ ರೋಗಗಳು ಬೆನ್ನು ಹತ್ತುತ್ತವೆ. ಹೃದಯಾಘಾತ, ಅಧಿಕ ರಕ್ತದೊತ್ತಡ, ಮಧುಮೇಹ, ಸ್ಟ್ರೋಕ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಅನಿದ್ರೆ ನಿಮ್ಮ ಲೈಂಗಿಕ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಹಿಳೆ ಹಾಗೂ ಪುರುಷನ ಲೈಂಗಿಕ ಶಕ್ತಿಯನ್ನು ಇದು ಕಡಿಮೆ ಮಾಡುತ್ತದೆ.
ಸರಿಯಾಗಿ ನಿದ್ರೆ ಬರದಿರುವುದು ಹಾಗೂ ಆರು ಗಂಟೆಗಿಂತ ಕಡಿಮೆ ನಿದ್ರೆ ಮಾಡುವ ವ್ಯಕ್ತಿ ಖಿನ್ನತೆಗೊಳಗಾಗುವುದು ಹೆಚ್ಚು.
ಅನಿದ್ರೆ ನಿಮ್ಮ ಸೌಂದರ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾರ್ಮೋನ್ ವ್ಯತ್ಯಾಸದಿಂದಾಗಿ ಮುಖ ಬಾಡಿ, ಕಣ್ಣಿನ ಕೆಳಗೆ ಕಪ್ಪು ಕಲೆಗಳು ಕಾಣಿಸಿಕೊಂಡು ವಯಸ್ಸಾದಂತೆ ಭಾಸವಾಗುತ್ತದೆ.
ನಿದ್ರಾ ಹೀನತೆ ಜ್ಞಾಪಕ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ. ಮರೆವಿನ ರೋಗ ನಿಧಾನವಾಗಿ ಹೆಚ್ಚಾಗುತ್ತದೆ. ಆರು ಗಂಟೆಗಿಂತ ಕಡಿಮೆ ನಿದ್ರೆ ಮಾಡುವವರಲ್ಲಿ ನೀವು ಒಬ್ಬರಾಗಿದ್ದರೆ ನಿಮಗೆ ನಿಧಾನವಾಗಿ ಮರೆವಿನ ರೋಗ ಕಾಣಿಸಿಕೊಳ್ಳಲು ಶುರುವಾಗುತ್ತದೆ.