ನಿಮ್ಮ ಮಾನಸಿಕ ಆರೋಗ್ಯ ಹಲವಾರು ವಿಚಾರಗಳನ್ನು ಆಧರಿಸಿದೆ. ಅವುಗಳಲ್ಲಿ ನಿಮ್ಮ ಮನೆ ಕೂಡ ಒಂದು. ದೀರ್ಘಕಾಲದಿಂದ ಬಾಡಿಗೆ ಮನೆಯಲ್ಲಿರುವವರು ಖಿನ್ನತೆಯಿಂದ ಬಳಲುವ ಸಾಧ್ಯತೆಗಳು ಹೆಚ್ಚು. ಸ್ವಂತ ಮನೆ ಖರೀದಿ ಮನುಷ್ಯನ ಜೀವನದ ಅತಿ ದೊಡ್ಡ ಬೆಳವಣಿಗೆ.
ಇದರಿಂದ ಒಂದು ರೀತಿಯ ಭದ್ರತೆಯ ಭಾವನೆ ಬರುತ್ತದೆ. ಹಾಗಾಗಿ ಮನೆ ಪ್ರತಿಯೊಬ್ಬರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ರೆ ವಿಪರೀತ ಬೆಲೆ ಏರಿಕೆಯಿಂದಾಗಿ ಸ್ವಂತ ಮನೆ ಜನ ಸಾಮಾನ್ಯರ ಪಾಲಿಗೆ ನನಸಾಗದ ಕನಸಿನಂತಾಗಿದೆ.
ಬಹು ಕಾಲದ ವರೆಗೆ ಬಾಡಿಗೆ ಮನೆಯಲ್ಲಿರುವವರಲ್ಲಿ ಖಿನ್ನತೆ ಮತ್ತು ಇತರ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡು ಬಂದಿವೆ. ಬಾಡಿಗೆ ಮನೆ ಜನರ ಜೀವನ ಮಟ್ಟದ ಮೇಲೆ ಕೂಡ ದುಷ್ಪರಿಣಾಮ ಬೀರುತ್ತದೆ.