ಗರ್ಭಿಣಿಯಾದಾಗ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡ್ತಾರೆ. ಆದ್ರೂ ಹೆರಿಗೆಯಾಗ್ತಿದ್ದಂತೆ ಅನೇಕ ಸಮಸ್ಯೆಗಳು ಶುರುವಾಗುತ್ತದೆ. ಹಾರ್ಮೋನಿನಲ್ಲಿ ಬದಲಾವಣೆಯಾಗುವುದ್ರಿಂದ ಮಹಿಳೆಯರಲ್ಲಿ ಮಾನಸಿಕ ಹಾಗೂ ಶಾರೀರಿಕ ಬದಲಾವಣೆಯಾಗುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಹೆರಿಗೆ ನಂತ್ರವೂ ಹೆಚ್ಚಿನ ಗಮನ ನೀಡಬೇಕಾಗುತ್ತದೆ.
ಸರಿಯಾದ ಡಯೆಟ್ ಕ್ರಮ ಅನುಸರಿಸುವ ಜೊತೆಗೆ ಸಣ್ಣ ಸಮಸ್ಯೆಯನ್ನೂ ನಿರ್ಲಕ್ಷ್ಯ ಮಾಡದೆ ಸೂಕ್ತ ಚಿಕಿತ್ಸೆ ಪಡೆಯಬೇಕಾಗುತ್ತದೆ. ಹೆರಿಗೆ ನಂತ್ರ ಅನೇಕ ಮಹಿಳೆಯರಿಗೆ ಮೂತ್ರದಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆ. ಇದ್ರಿಂದಾಗಿ ಪದೇ ಪದೇ ಮೂತ್ರಕ್ಕೆ ಹೋಗಬೇಕೆನ್ನಿಸುತ್ತದೆ.
ಕೆಲ ಮಹಿಳೆಯರಿಗೆ ಹೆರಿಗೆ ನಂತ್ರ ಮುಟ್ಟಿನ ಸಮಸ್ಯೆ ಕಾಡಲು ಶುರುವಾಗುತ್ತದೆ. ಮುಟ್ಟಿನ ಅವಧಿ ವಿಳಂಬವಾಗುತ್ತದೆ. ಕೆಲ ಮಹಿಳೆಯರಿಗೆ ವರ್ಷವಾದ್ರೂ ಮುಟ್ಟು ಶುರುವಾಗುವುದಿಲ್ಲ. ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಮುಟ್ಟಾಗುವುದಿಲ್ಲ.
ಹೆರಿಗೆ ನಂತ್ರ ಸ್ತನದ ಸಮಸ್ಯೆ ಕೂಡ ಕಾಡುತ್ತದೆ. ಕೆಲ ಮಹಿಳೆಯರ ಸ್ತನದ ಗಾತ್ರ ದೊಡ್ಡದಾಗುತ್ತದೆ. ಮತ್ತೆ ಕೆಲವರ ಸ್ತನದಲ್ಲಿ ನೋವು, ಊತ ಕಾಣಿಸಿಕೊಳ್ಳುತ್ತದೆ.
ಹೆರಿಗೆಯಾದ ಕೆಲ ತಿಂಗಳುಗಳ ಕಾಲ ಕೂದಲು ಉದುರುವ ಸಮಸ್ಯೆ ಹೆಚ್ಚಿಸುತ್ತದೆ. ನಂತ್ರದ ದಿನಗಳಲ್ಲಿ ಸಮಸ್ಯೆ ಸರಿಯಾಗುತ್ತದೆ.
ಹೆರಿಗೆ ನಂತ್ರ ಚರ್ಮದ ಸಮಸ್ಯೆ ಕಾಡುತ್ತದೆ. ಕೆಲವರ ಚರ್ಮ ಒಣಗಿದ್ರೆ ಮತ್ತೆ ಕೆಲವರ ಚರ್ಮದ ಬಣ್ಣ ಬದಲಾಗುತ್ತದೆ.