
ಥೈರಾಯ್ಡ್ ಸೈಲೆಂಟ್ ಕಿಲ್ಲರ್. ಇದು ದೇಹದ ಚಯಾಪಚಯದ ಮೇಲೆ ಸಂಪೂರ್ಣ ಪ್ರಭಾವ ಬೀರುತ್ತದೆ. ಚಯಾಪಚಯ ಸರಿಯಾಗಿ ಆಗದಿದ್ದಲ್ಲಿ ಥೈರಾಯ್ಡ್ ಹಾರ್ಮೋನುಗಳು ವೇಗವಾಗಿ ಹೆಚ್ಚಾಗುತ್ತವೆ ಅಥವಾ ಕಡಿಮೆಯಾಗುತ್ತವೆ. ಇದು ಮನುಷ್ಯನ ದಿನನಿತ್ಯದ ಜೀವನದ ಮೇಲೆ ಪ್ರಭಾವ ಬೀರುತ್ತದೆ.
ಬಹುತೇಕ ಮಹಿಳೆಯರಲ್ಲಿ ಈ ಥೈರಾಯ್ಡ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೆಲ ಪುರುಷರು ಕೂಡ ಇದ್ರಿಂದ ಬಳಲ್ತಾರೆ. ಪುರುಷರ ಥೈರಾಯ್ಡ್ ಲಕ್ಷಣಗಳು ಇಲ್ಲಿವೆ.
ಥೈರಾಯ್ಡ್ ನಿಂದ ಬಳಲುತ್ತಿರುವ ಪುರುಷರಲ್ಲಿ ಸುಸ್ತು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ದಿನದ ಕೊನೆಯಲ್ಲ ಬೆಳಿಗ್ಗೆಯಿಂದಲೇ ಸುಸ್ತು ಸುಸ್ತು ಎಂದುಕೊಂಡು ಓಡಾಡ್ತಿರುತ್ತಾರೆ ಇದ್ರಿಂದ ಬಳಲುತ್ತಿರುವವರು.
ಹೃದಯ ಬಡಿತ ಹಾಗೂ ನಾಡಿ ಬಡಿತ ನಿಧಾನವಾಗುವುದು ಕೂಡ ಥೈರಾಯ್ಡ್ ನ ಒಂದು ಲಕ್ಷಣ.
ಹೈಪರ್ ಥೈರಾಯ್ಡ್ ನಲ್ಲಿ ಚಯಾಪಚಯ ಪ್ರಕ್ರಿಯೆ ವೇಗವಾಗಿ ನಡೆಯುತ್ತದೆ. ಇದ್ರಿಂದ ಬಳಲುವ ವ್ಯಕ್ತಿಗೆ ಮಲಗಲು ತೊಂದರೆಯಾಗುತ್ತದೆ. ಉಸಿರಾಡಲು ತೊಂದರೆಯಾಗುತ್ತದೆ.
ಥೈರಾಯ್ಡ್ ನಿಂದ ಬಳಲುವ ಪುರುಷರಿಗೆ ಮಲಬದ್ಧತೆ ಒಂದು ಸಾಮಾನ್ಯ ಸಮಸ್ಯೆ. ನೀವು ಮಲಬದ್ಧತೆಯಿಂದ ಬಳಲುತ್ತಿದ್ದು, ಯಾವುದೇ ಔಷಧಿ ಮಾಡಿದ್ರೂ ಕಡಿಮೆಯಾಗಿಲ್ಲ ಎಂದಾದಲ್ಲಿ ಮೊದಲು ಥೈರಾಯ್ಡ್ ಇದೆಯಾ ಎಂಬುದನ್ನು ಪರೀಕ್ಷಿಸಿಕೊಳ್ಳಿ.
ಸಮತೋಲನ ಆಹಾರ ಸೇವನೆ ಮಾಡ್ತಾ ಇದ್ದರೂ ತೂಕ ಹೆಚ್ಚಾಗುತ್ತಿದ್ದರೆ ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳೋದು ಉತ್ತಮ. ಥೈರಾಯ್ಡ್ ಇದ್ದವರಿಗೆ ತೂಕ ಒಂದೇ ಸಮನೆ ಏರುತ್ತಿರುತ್ತದೆ. ಎಷ್ಟು ವ್ಯಾಯಾಮ ಮಾಡಿದ್ರೂ ತೂಕ ಇಳಿಯೋದಿಲ್ಲ.
ಥೈರಾಯ್ಡ್ ನಿಂದ ಬಳಲುತ್ತಿರುವ ಪುರುಷನಿಗೆ ಸ್ನಾಯ ನೋವು ಕಾಣಿಸಿಕೊಳ್ಳುತ್ತದೆ. ಸೊಂಟ ಹಾಗೂ ಭುಜಗಳ ನೋವಿನಿಂದ ಬಳಲಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿದ್ದಲ್ಲಿ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಇದೆ.
ಕೆಲ ಪುರುಷರ ಚರ್ಮ ಹಾಗೂ ಕೂದಲು ಥೈರಾಯ್ಡ್ ಪ್ರಭಾವಕ್ಕೊಳಗಾಗುತ್ತದೆ. ಕ್ರಮೇಣ ಚರ್ಮ ಶುಷ್ಕವಾಗಿ ನಿರ್ಜೀವವಾಗುತ್ತದೆ. ಕೂದಲು ತೆಳುವಾಗಿ ಒರಟಾಗುತ್ತ ಬರುತ್ತದೆ.