
ಕಾನ್ಪುರದ ಮೂಲೆಯೊಂದರಲ್ಲಿರುವ ಶಿವನ ಈ ದೇವಸ್ಥಾನದ ಕೊಳವು ಆಮೆಗಳಿಗೆ ಹೇಳಿ ಮಾಡಿಸಿದ ಮನೆಯಂತಾಗಿದೆ.
ಕಾಂಕ್ರೀಟ್ ಕಾಡಿನ ನಡುವೆ ಇರುವ ಈ ದೇವಸ್ಥಾನದಲ್ಲಿ, ಧಾರ್ಮಿಕ ನಂಬಿಕೆಗಳ ಬಲದಿಂದ ಈ ಕೊಳ ಇನ್ನೂ ಸುರಕ್ಷಿತವಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಆಮೆಗಳಿಗೆ ಊಟೋಪಚಾರ ಮಾಡುತ್ತಾ ಅವುಗಳನ್ನು ಪೋಷಿಸುತ್ತಿದ್ದಾರೆ.
ಕಿರುಕುಳ ಕೊಡುತ್ತಿದ್ದ ಅಪರಿಚಿತನಿಗೆ ಯುವತಿ ಮಾಡಿದ್ದೇನು ಗೊತ್ತಾ…..?
“200 ವರ್ಷಗಳಷ್ಟು ಹಳೆಯದಾದ ಈ ದೇವಸ್ಥಾನದಲ್ಲಿರುವ ಕೊಳ ಇನ್ನೂ ಹಳೆಯದು. ಈ ಆಮೆಗಳು ಸಹ ಬಹಳ ಹಳೆಯವಾಗಿರುವ ಸಾಧ್ಯತೆಯೂ ಇದ್ದು ವನ್ಯಜೀವಿ ತಜ್ಞರು ಇದನ್ನು ಖಾತ್ರಿ ಪಡಿಸಬೇಕಿದೆ. ಇದುವರೆಗೂ ಯಾವ ತಜ್ಞರೂ ಈ ಕೊಳಕ್ಕೆ ಭೇಟಿ ಕೊಟ್ಟಿಲ್ಲ,” ಎಂದು ಸ್ಥಳೀಯ ನಿವಾಸಿ ರಾಜೇಶ್ ಪಾಠಕ್ ತಿಳಿಸುತ್ತಾರೆ.
ಅವನತಿಯ ಅಂಚಿಗೆ ಸಾಗಿರುವ ಆಮೆಗಳನ್ನು ವನ್ಯಜೀವಿ (ಸಂರಕ್ಷಣೆ) ಕಾಯಿದೆ, 1972ರ ಅಡಿಯಲ್ಲಿ ಸಂರಕ್ಷಿಸಲು ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ.