ನಮ್ಮಲ್ಲಿ ದಪ್ಪ ಇದ್ದರೂ ಕಷ್ಟ, ಸಣಕಲು ಶರೀರ ಇದ್ದರೂ ಸಹ ಕಷ್ಟ ಅನ್ನುವಂತಹ ಪರಿಸ್ಥಿತಿ ಇದೆ. ಕೆಲವರು ತಾವು ಎಷ್ಟೇ ದಪ್ಪ ಇದ್ದರೂ ಅದರ ಬಗ್ಗೆ ಅಷ್ಟೊಂದು ಚಿಂತೆ ಪಡುವುದಿಲ್ಲ. ಇನ್ನು ಫ್ಯಾಷನ್ ಪ್ರಪಂಚವು ದಪ್ಪ ಅಥವಾ ಸಣ್ಣ ಇದ್ದರೂ ಕೂಡ ಸುಂದರವಾಗಿಯೇ ಕಾಣಿಸುತ್ತಾರೆ ಎಂಬ ಧ್ಯೇಯ ವಾಕ್ಯವನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಲು ಮುಂದೆ ಬಂದಿವೆ.
ಇತ್ತೀಚೆಗೆ ಪ್ರಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ದಪ್ಪಗಿರುವ ರೂಪದರ್ಶಿಯ ಫೋಟೋ ಶೂಟ್ ಮಾಡುವ ಮುಖಾಂತರ ದೇಹದ ಸಕರಾತ್ಮಕತೆ ಬಗ್ಗೆ ಬೆಳಕು ಚೆಲ್ಲಿದ್ದಾರೆ. ರೂಪದರ್ಶಿಯಾಗಿ ಕಾಣಿಸಿಕೊಂಡ ಸಾಕ್ಷಿ ಸಿಂಧ್ವಾನಿ ಅವರು ವಧುವಿನ ಉಡುಗೆಯಲ್ಲಿ ಮಿಂಚಿದ್ದಾರೆ. ಕೆಂಪು ಬಣ್ಣದ ಲೆಹೆಂಗಾ ತೊಟ್ಟು, ಸುಂದರವಾದ ಆಭರಣಗಳನ್ನು ಧರಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಂಚಿಕೊಂಡಿರುವ ಸಾಕ್ಷಿ, “ಇಡೀ ತಂಡವು ಬಹಳ ಚೆನ್ನಾಗಿತ್ತು. ತಾನು ಆ ತಂಡದ ಭಾಗವಾಗಿದ್ದು ಖುಷಿ ತಂದಿದೆ. ಹಾಗೂ ಅಲ್ಲಿದ್ದ ಶಕ್ತಿ ನಂಬಲಸಾಧ್ಯವಾಗಿತ್ತು. ನಾವು ಬದಲಾವಣೆಯನ್ನು ನೋಡಿದರೆ, ಬದಲಾವಣೆಯನ್ನು ನಂಬುತ್ತೇವೆ ಹಾಗೂ ಇದು ಬದಲಾವಣೆಯಾಗಿದೆ” ಎಂದು ಬರೆದಿದ್ದಾರೆ.
https://www.instagram.com/p/CS8jGSupioP/?utm_source=ig_web_copy_link