ಮನುಷ್ಯನ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಜಾತಕದ ಜೊತೆ ಸಂಬಂಧ ಹೊಂದಿದೆ. ಜಾತಕದಲ್ಲಿ ಏರುಪೇರಾದ್ರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಜಾತಕದಲ್ಲಿ ಹನ್ನೆರಡು ಮನೆ ಹಾಗೂ ಒಂಭತ್ತು ಗ್ರಹವಿದೆ. ಜಾತಕದ ಎರಡನೇ ಮನೆ ಹಣ, ಮಾತು, ಬಾಯಿಗೆ ಸಂಬಂಧಿಸಿದೆ.
ಜಾತಕದ ಎರಡನೇ ಮನೆಯಲ್ಲಿ ಒಳ್ಳೆ ಗ್ರಹಗಳು ತಳವೂರಿದ್ದರೆ ಮನುಷ್ಯನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಅದೃಷ್ಟದ ಮಳೆಯಾಗುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಅದೇ ಎರಡನೇ ಮನೆಗೆ ರಾಹು ಬಂದು ಕುಳಿತರೆ ಗ್ರಹಚಾರ ಕೆಟ್ಟಂತೆ. ವ್ಯಕ್ತಿಗಳು ಮಾದಕ ವ್ಯಸನಿಗಳಾಗಿ ಬದಲಾಗ್ತಾರೆ. ನಿಮ್ಮ ಮನೆಯಲ್ಲಿ ಅಥವಾ ಸಂಬಂಧಿಕರು, ಸ್ನೇಹಿತರಲ್ಲಿ ಮಾದಕ ವ್ಯಸನಿಗಳಿದ್ದರೆ, ಚಟಕ್ಕೆ ಬಲಿಯಾಗಿದ್ದರೆ ಅವರ ಜಾತಕದ ಎರಡನೇ ಮನೆಯಲ್ಲಿ ರಾಹು ಉತ್ತುಂಗದಲ್ಲಿದ್ದಾನೆ ಎಂದರ್ಥ.
ರಾಹು ಪ್ರಭಾವ ಕಡಿಮೆ ಆಗಬೇಕು, ಮಾದಕ ವ್ಯಸನಿಗಳು ಸರಿದಾರಿಗೆ ಬರಬೇಕು ಎಂದಾದ್ರೆ ಬುಧವಾರದಂದು ದಾನ ಮಾಡಬೇಕು. ಪ್ರತಿ ಬುಧವಾರ, ಮಾದಕ ವ್ಯಸನಿಯಿಂದ ಬಡವರು ಅಥವಾ ಅಂಗವಿಕಲರಿಗೆ ಆಹಾರ ದಾನ ಮಾಡಿಸುತ್ತ ಬನ್ನಿ. ಕೆಲವೇ ದಿನಗಳಲ್ಲಿ ಈ ಚಟದಿಂದ ಅವರು ಮುಕ್ತಿ ಹೊಂದುತ್ತಾರೆ. ಇದಲ್ಲದೆ ರಾಹುವನ್ನು ಶಾಂತಗೊಳಿಸುವ ಇತರೆ ಉಪಾಯಗಳನ್ನು ಅನುಸರಿಸಬಹುದು.