ಮೋಡಿ ಮಾಡುತ್ತೆ ಸೌಂದರ್ಯ ನಗರಿ ಸಿಕ್ಕಿಂನ ಈ ಸ್ಥಳ 02-07-2024 5:50AM IST / No Comments / Posted In: Latest News, India, Live News, Tourism ಪ್ರಕೃತಿ ದೇವಿ ಎಲ್ಲಾ ಪ್ರದೇಶಗಳಲ್ಲಿಯೂ ಒಲಿಯೋದಿಲ್ಲ. ಒಂದೊಮ್ಮೆ ಒಲಿದರೂ ಮನುಷ್ಯನ ಸ್ವಾರ್ಥಕ್ಕೆ ನಾಶವಾಗೋದೇ ಹೆಚ್ಚು. ಆದರೆ ಕೆಲವೊಂದು ಸ್ಥಳಗಳು ಮಾತ್ರ ಈ ಎರಡು ಮಾತಿಗೂ ತದ್ವಿರುದ್ಧವಾಗಿ ನಿಲ್ಲುತ್ತೆ. ಈ ಸಾಲಿಗೆ ಸೇರುವ ಸ್ಥಳವೇ ಪೂರ್ವ ಸಿಕ್ಕಿಂನ ಅರಿಟಾರ್. ನೀವೇನಾದರೂ ಪರಿಸರ ಪ್ರಿಯರಾಗಿದ್ದರೆ ಈ ಅರಿಟಾರ್ ನಿಮಗೆ ಹೇಳಿ ಮಾಡಿಸಿದಂತಹ ಜಾಗವಾಗಿದೆ. ಸುಂದರವಾದ ಬೆಟ್ಟ, ಅರಣ್ಯಗಳ ರಾಶಿ, ಪ್ರಶಾಂತ ಸರೋವರಗಳು ನಿಮ್ಮ ಮನಸ್ಸಿಗೆ ಮುದ ನೀಡದೇ ಇರದು. ಅರಿಟಾರ್ನಲ್ಲಿ ನೀವು ಲಂಪೋಖರಿ ಸರೋವರ, ಮಂಖಿಮ್, ಲವ್ ದಾರ. ಅರಿಟಾರ್ ಗುಂಪಾಗಳೆಂಬ ಸ್ಥಳಗಳನ್ನ ನೋಡಬಹುದಾಗಿದೆ. ಅರಿಟಾರ್ ಪ್ರವಾಸೀ ತಾಣವಾಗಿ ಬದಲಾಗೋದ್ರ ಹಿಂದೆ ಬ್ರಿಟೀಷರ ಶ್ರಮ ಅಡಗಿದೆ. 1904ರಲ್ಲಿ ಇಂಡೋ – ಟಿಬೆಟ್ ವ್ಯಾಪಾರ ಸಮಾವೇಶ ಇದೇ ಸ್ಥಳದಲ್ಲಿ ನಡೆದಿದೆ. ಬ್ರಿಟೀಷರು ಇಲ್ಲಿ ರಸ್ತೆಗಳನ್ನ ನಿರ್ಮಾಣ ಮಾಡಿದ್ರು. ಆದರೆ ಯುದ್ಧದ ಟಿಬೇಟಿಯನ್ನರು ಈ ಸ್ಥಳಗಳನ್ನ ನಾಶ ಮಾಡಿದ್ದಾರೆ. ಈ ಪ್ರದೇಶದಲ್ಲಿ ನೀವು ಸರೋವರದ ಸುತ್ತ ಕುದುರೆ ಸವಾರಿ ಮಾಡಬಹುದು. ದೋಣಿ ವಿಹಾರವೂ ಪ್ರವಾಸಿಗರಿಗೆ ಮುಕ್ತವಾಗಿದೆ. ಚಾರಣ ಪ್ರಿಯರಂತೂ ಇಲ್ಲಿನ ಬೆಟ್ಟಗಳನ್ನ ಹತ್ತಿ ಏರಬಹುದಾಗಿದೆ. ಇಲ್ಲಿ ಪ್ರತಿ ವರ್ಷ ಏಪ್ರಿಲ್ ಕೊನೆಯ ವಾರ ಇಲ್ಲವೇ ಮೇ ಆರಂಭದಲ್ಲಿ ಲಂಪೋಖರಿ ಪ್ರವಾಸೋದ್ಯಮ ಉತ್ಸವವನ್ನ ಆಚರಣೆ ಮಾಡಲಾಗುತ್ತೆ. ಈ ಹಬ್ಬದ ವೇಳೆ ಸಾಕಷ್ಟು ಸಾಹಸ ಕ್ರೀಡೆಗಳನ್ನ ಆಯೋಜಿಸಲಾಗುತ್ತೆ. ಇಲ್ಲಿನ ಆಹಾರ ಕೂಡ ಸಖತ್ ಫೇಮಸ್ ಆಗಿದೆ.