alex Certify ಈ 9 ಮಂದಿಯ ಪಾಕಿಸ್ತಾನಿ ಕುಟುಂಬ ಹುಟ್ಟಿದ್ದು ಒಂದೇ ದಿನ, ಇಸವಿ ಮಾತ್ರ ಬೇರೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ 9 ಮಂದಿಯ ಪಾಕಿಸ್ತಾನಿ ಕುಟುಂಬ ಹುಟ್ಟಿದ್ದು ಒಂದೇ ದಿನ, ಇಸವಿ ಮಾತ್ರ ಬೇರೆ….!

ಅನೇಕರು ಹಲವಾರು ರೀತಿಯಲ್ಲಿ ಗಿನ್ನಿಸ್ ವಿಶ್ವದಾಖಲೆಗೆ ಪಾತ್ರರಾಗುತ್ತಾರೆ. ಇಲ್ಲೊಂದೆಡೆ ಕುಟುಂಬದಲ್ಲಿ ಎಲ್ಲರ ಜನ್ಮದಿನವೂ ಒಂದೇ ದಿನ ಆಗಿರುವುದರಿಂದ ಈ ಕುಟುಂಬ ಗಿನ್ನಿಸ್ ವಿಶ್ವದಾಖಲೆಗೆ ಪಾತ್ರವಾಗಿದೆ.

ಹೌದು, ಲರ್ಕಾನಾದ ಪಾಕಿಸ್ತಾನಿ ಕುಟುಂಬವು 2019 ರಿಂದ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದೆ. ಪೋಷಕರು ಸೇರಿದಂತೆ ಒಂಬತ್ತು ಜನರ ಈ ಕುಟುಂಬದಲ್ಲಿ ಎಲ್ಲರ ಹುಟ್ಟಿದ ಹಬ್ಬಗಳು ಒಂದೇ ದಿನ ಆಗಿವೆ. ಇವರೆಲ್ಲಾ ಆಗಸ್ಟ್ 1ರಂದು ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸುತ್ತಾರೆ. ಈ ಮೂಲಕ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ.

ಮಾಂಗಿ ಕುಟುಂಬವು ಒಂದೇ ಜನ್ಮದಿನವಾದ ಆಗಸ್ಟ್ 1 ರಂದು ಹುಟ್ಟಿದ ಏಳು ಮಕ್ಕಳನ್ನು ಪೋಷಿಸುತ್ತಿದೆ. ಅಮೀರ್ ಮತ್ತು ಖುದಿಜಾ ಈ ಮಕ್ಕಳ ಪೋಷಕರು. ಮಕ್ಕಳಾದ ಸಿಂಧೂ, ಸಾಸುಯಿ, ಸಪ್ನಾ, ಅಮೀರ್, ಅಂಬರ್, ಅಮ್ಮಾರ್ ಮತ್ತು ಅಹ್ಮರ್ ಆಗಸ್ಟ್ 1ರಂದು ಜನಿಸಿದವರು. ಹೀಗಾಗಿ ಒಂದೇ ದಿನದಲ್ಲಿ ಜನಿಸಿದ ಒಡಹುಟ್ಟಿದವರು ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಂದಹಾಗೆ, ಅಮೀರ್ ಮತ್ತು ಖುದಿಜಾ ಅವರ ವಿವಾಹವಾಗಿದ್ದು ಸಹ ಆಗಸ್ಟ್ 1ರಂದು. ದಂಪತಿಗಳು 1991 ರಲ್ಲಿ ತಮ್ಮ ಹುಟ್ಟುಹಬ್ಬದಂದೇ ಇವರಿಬ್ರು ವಿವಾಹವಾಗಿದ್ದು ವಿಶೇಷ. ಮದುವೆಯಾದ ಸರಿಯಾಗಿ ಒಂದು ವರ್ಷದ ನಂತರ, ಆಗಸ್ಟ್ 1ರಂದು ತಮ್ಮ ಹಿರಿಯ ಮಗಳು ಸಿಂಧೂಗೆ ಜನ್ಮ ನೀಡಿದರು.

ಕಾಕಾತಾಳೀಯವೆಂಬಂತೆ ಮಾಂಗಿ ಕುಟುಂಬವು ಅವಳಿಗಳಿಗೆ ಜನ್ಮ ನೀಡಿತು. ಅವಳಿ ಹೆಣ್ಣುಮಕ್ಕಳಾದ ಸಸುಯಿ ಮತ್ತು ಸಪ್ನಾ ಜನಿಸಿದ್ದು ಕೂಡ ಆಗಸ್ಟ್ 1ರಂದು. ಹೆಣ್ಣು ಮಕ್ಕಳು ಹುಟ್ಟಿದ ಐದು ವರ್ಷಗಳ ನಂತರ, ಅಮ್ಮರ್ ಮತ್ತು ಅಹ್ಮರ್ ಎಂಬ ಅವಳಿ ಗಂಡು ಮಕ್ಕಳು 2003 ರಲ್ಲಿ ಜನಿಸಿದರು. ಬಳಿಕ ಮತ್ತೆ ಇಬ್ಬರು ಅವಳಿ ಗಂಡು ಮಕ್ಕಳಿಗೂ ಆಗಸ್ಟ್ 1ರಂದೇ ಜನ್ಮ ನೀಡಿದ್ರು. ಈ ಮೂಲಕ ತಾವು ಹುಟ್ಟಿದ್ದು, ವಿವಾಹವಾಗಿದ್ದು ಮಾತ್ರವಲ್ಲದೆ, ಮಕ್ಕಳು ಕೂಡ ಆಗಸ್ಟ್ 1ರಂದೆ ಜನಿಸಿದ್ದು ವಿಶೇಷ.

ಅಮೀರ್ ಗಿನ್ನಿಸ್ ವಿಶ್ವದಾಖಲೆ ಮಾಡಬೇಕೆಂದು ತನ್ನ ಮಕ್ಕಳು ಒಂದೇ ದಿನದಲ್ಲಿ ಜನಿಸಬೇಕೆಂದು ಪ್ರಜ್ಞಾಪೂರ್ವಕವಾಗಿ ಯೋಜಿಸಿರಲಿಲ್ಲ. ಇದೆಲ್ಲವೂ ಸಹಜವಾಗಿದ್ದು, ಅಲ್ಲಾಹನ ಕೃಪೆ ಎಂದು ಅಮೀರ್ ಹೇಳಿದ್ದಾರೆ. ಎಲ್ಲಾ ಮಕ್ಕಳೂ ಸ್ವಾಭಾವಿಕವಾಗಿ ಜನಿಸಿದ್ದಾರೆ ಎಂದು ಸಂಸ್ಥೆ ವರದಿ ಮಾಡಿದೆ. ಯಾವುದೇ ಮಕ್ಕಳನ್ನು ಸಿಸೇರಿಯನ್ ಮೂಲಕ ಅಥವಾ ಅಕಾಲಿಕವಾಗಿ ಹೆರಿಗೆ ಮಾಡಲಾಗಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...