alex Certify ಕಾರು ಚಾಲಕನ ಗೇರ್​ ಚೇಂಜಿಂಗ್​ ಸ್ಟೈಲ್​ಗೆ ಮನಸೋತ ಯುವತಿ; ಇಬ್ಬರೂ ಈಗ ದಂಪತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ಚಾಲಕನ ಗೇರ್​ ಚೇಂಜಿಂಗ್​ ಸ್ಟೈಲ್​ಗೆ ಮನಸೋತ ಯುವತಿ; ಇಬ್ಬರೂ ಈಗ ದಂಪತಿ….!

ಕರಾಚಿ: ಪ್ರೀತಿ ಎಂಬುದು ಒಂಥರಾ ವಿಚಿತ್ರ. ಯಾವಾಗ, ಎಲ್ಲಿ, ಹೇಗೆ ಚಿಗುರುತ್ತದೆ ಎಂದು ಹೇಳುವುದೇ ಕಷ್ಟ. ಇಲ್ಲೊಂದು ಕುತೂಹಲ ಘಟನೆಯೊಂದರಲ್ಲಿ ಕಾರು ಕಲಿಸಲು ಬಂದ ಚಾಲಕನ ಗೇರ್ ಚೇಂಜಿಂಗ್ ಸ್ಟೈಲ್​ಗೆ ಮನಸೋತು ಆತನನ್ನೇ ಮದುವೆಯಾಗಿದ್ದಾಳೆ !

ಈ ಘಟನೆ ನಡೆದಿರುವುದು ಪಾಕಿಸ್ತಾನದಲ್ಲಿ ಡ್ರೈವಿಂಗ್​ ಕಲಿಯಲು ಯುವತಿ ಡ್ರೈವಿಂಗ್​ ಸ್ಕೂಲ್​ಗೆ ದಾಖಲಾಗಿದ್ದಳು. ಚಾಲಕನ ಡ್ರೈವಿಂಗ್ ಸ್ಟೈಲ್ ಆಕೆಯ ಮನಸ್ಸು ಗೆದ್ದಿತ್ತು. ವಿಭಿನ್ನ ಶೈಲಿಯ ಡ್ರೈವಿಂಗ್ ಸ್ಕಿಲ್ ಅನ್ನು ಹೊಂದಿದ್ದ ಚಾಲಕನ ಗೇರ್ ಚೇಂಜಿಂಗ್ ಸ್ಟೈಲ್ ಯುವತಿಗೆ ಅಚ್ಚುಮೆಚ್ಚಾಯಿತು. ಗೇರ್ ಮೇಲೆ ಕೈ ಇಟ್ಟಿರುವ ಚಾಲಕನ ಕೈ ಮೇಲೆ ಕೈ ಇಟ್ಟುಕೊಂಡು ಕೂರುವುದೇ ಯುವತಿಗೆ ಪ್ರಿಯವಾಯಿತು. ಅಲ್ಲಿಂದ ಆತನಿಗೆ ಯುವತಿ ಮನಸೋತಳು.

ನಂತರ ತನ್ನ ಮನದಿಂಗಿತವನ್ನು ಚಾಲಕನಿಗೆ ಹೇಳಿದಾಗ, ಆತನಿಗೂ ಇವಳು ಇಷ್ಟವಾದಳು. ಇಬ್ಬರ ಮನೆಯವರೂ ಇದಕ್ಕೆ ಒಪ್ಪಿಗೆ ಸೂಚಿಸಿದರು. ಸದ್ಯ ಇಬ್ಬರೂ ಮದುವೆಯಾಗಿದ್ದಾರೆ. ಇವರ ಅಪರೂಪದ ಪ್ರೇಮ ಕಥನ ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗಿದ್ದು, ಥರಹೇವಾರಿ ಕಮೆಂಟ್​ಗಳು ಬರುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...