ದಿನ ಹೋದಂತೆ ಹೊಟ್ಟೆ ದೊಡ್ಡದಾಗ್ತಾ ಇದೆ. ಏನು ಮಾಡಿದ್ರೂ ಹೊಟ್ಟೆ ಕರಗ್ತಾ ಇಲ್ಲ ಎನ್ನುವವರ ಸಂಖ್ಯೆ ಜಾಸ್ತಿಯಾಗ್ತಾ ಇದೆ. ನಮ್ಮ ಜೀವನ ಶೈಲಿ, ಆಹಾರ, ಬೊಜ್ಜಿಗೆ ಕಾರಣವಾಗ್ತಾ ಇದೆ. ಹೊಟ್ಟೆಯನ್ನು ಆದಷ್ಟು ಬೇಗ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಈ ಮಾರ್ಗ ಅನುಸರಿಸಿ.
ಮನೆ ಮದ್ದು ಸೇವಿಸಬೇಕೆಂದೇನೂ ಇಲ್ಲ. ಪ್ರತಿದಿನ ಸ್ವಲ್ಪ ಬೇಗ ಎದ್ದು, ನಿತ್ಯ ಕಾರ್ಯ ಮುಗಿಸಿ, ಒಂದೇ ಒಂದು ಆಸನ, ನೌಕಾಸನವನ್ನು ಮಾಡುತ್ತ ಬನ್ನಿ.
ಈ ಆಸನದಿಂದ ಅನೇಕ ಉಪಯೋಗಗಳಿವೆ. ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಕೊಬ್ಬು ಕರಗಿ ಸ್ನಾಯುಗಳು ಬಲಗೊಳ್ಳುತ್ತವೆ. ಈ ಆಸನವನ್ನು ಪ್ರತಿದಿನ 10 ಬಾರಿ ಮಾಡಬೇಕು. ಯೋಗ ತಜ್ಞರಿಂದ ತರಬೇತಿ ಪಡೆದು ಈ ಆಸನ ಮಾಡುವುದು ಒಳ್ಳೆಯದು.