alex Certify ನಿಮ್ಮ ಬಳಿ ಇದೆಯಾ ಈ 1 ರೂ. ಮುಖಬೆಲೆಯ ನೋಟು…? ಹಾಗಾದ್ರೆ ನೀವು ಗಳಿಸ್ತೀರಿ ಲಕ್ಷ ಲಕ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಬಳಿ ಇದೆಯಾ ಈ 1 ರೂ. ಮುಖಬೆಲೆಯ ನೋಟು…? ಹಾಗಾದ್ರೆ ನೀವು ಗಳಿಸ್ತೀರಿ ಲಕ್ಷ ಲಕ್ಷ

ಒಂದು ಕಾಲವಿತ್ತು, ಆಗ ನಾಣ್ಯ ಮತ್ತು ಹಳೆಯ ನೋಟುಗಳ ಸಂಗ್ರಹ ಉತ್ತಮ ಹವ್ಯಾಸ ಮಾತ್ರವೇ ಆಗಿತ್ತು. ಈ ಹವ್ಯಾಸಕ್ಕಾಗಿ ಕೆಲವೇ ಜನರು ತಮ್ಮ ಉಳಿತಾಯವನ್ನೇ ಖಾಲಿ ಮಾಡಿಕೊಂಡು ಜೀವನ ಸಾಗಿಸಿದ ಉದಾಹರಣೆಗಳಿವೆ.

ಆದರೆ, ಈಗ ಕಾಲ ಬದಲಾಗಿದೆ. ಪುರಾತನ ನೋಟು, ನಾಣ್ಯಗಳು ಇರುವವರು ಆನ್‌ಲೈನ್‌ನಲ್ಲಿ ಬಹುಬೇಡಿಕೆಯಲ್ಲಿದ್ದಾರೆ. ಓಎಲ್‌ಎಕ್ಸ್‌, ಕ್ವಿಕರ್‌ ಹಾಗೂ ಇಂಡಿಯಾ ಮಾರ್ಟ್‌ನಲ್ಲಿ ಆನ್‌ಲೈನ್‌ ಮಾರುಕಟ್ಟೆಗಳಲ್ಲಿ ಹಳೆಯ ನಾಣ್ಯಗಳು, ನೋಟುಗಳನ್ನು ಲಕ್ಷಗಟ್ಟಲೆ ಬೆಲೆಗೆ ಮಾರಿಬಿಟ್ಟು ಒಂದೇ ದಿನದಲ್ಲಿ ಲಕ್ಷಾಧಿಪತಿಗಳಾಗುತ್ತಿದ್ದಾರೆ.

BIG NEWS: ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್; ಸಿಡಿ ಬೇಕಿದ್ದರೂ ಬಿಡುಗಡೆ ಮಾಡಲಿ ಎಂದ ಶಾಸಕ ಯತ್ನಾಳ್

ಈ ಹಳೆಯ ನೋಟುಗಳ ಪೈಕಿ ಬಹಳ ಬೇಡಿಕೆಯಲ್ಲಿರುವುದು ’ 1 ರೂಪಾಯಿ ಮುಖಬೆಲೆಯ ನೋಟು’. ಹಾಗಿದ್ದರೆ ಇದರ ವಿಶೇಷತೆ ಏನು ?

ದೇಶದಲ್ಲಿ ಮೊದಲ ಬಾರಿಗೆ ಮುದ್ರಣ ಕಂಡ 1 ರೂ. ಮುಖಬೆಲೆಯ ನೋಟು ಇದು. 1917ರ ನ.30ರಂದು ಮುದ್ರಣ ಆರಂಭವಾಯಿತು. ಕೇವಲ ಒಂಭತ್ತು ವರ್ಷಗಳು, ಅಂದರೆ 1926ರವರೆಗೆ ಮಾತ್ರವೇ ಈ ನೋಟುಗಳನ್ನು ಮುದ್ರಿಸಲಾಯಿತು.

ಈ ನೋಟಿನ ಮೇಲೆ ‘ 5ನೇ ಕಿಂಗ್‌ ಜಾರ್ಜ್‌’ ನ ಚಿತ್ರವಿದೆ. ಹೀಗಾಗಿ ಈ ನೋಟು ಬಹಳ ವಿಶೇಷತೆ ಪಡೆದಿದೆ. ಕೇವಲ ಭಾರತ ಮಾತ್ರವಲ್ಲ, ಬ್ರಿಟನ್‌ನಲ್ಲಿ ಕೂಡ ರಾಜಮನೆತನದ ಅಭಿಮಾನಿಗಳು ಈ ನೋಟನ್ನು ತಮ್ಮ ಸಂಗ್ರಹದಲ್ಲಿ ಇರಿಸಿಕೊಳ್ಳಲು ಆನ್‌ಲೈನ್‌ ಮಾರಾಟ ಜಾಲದಲ್ಲಿ ಮುಗಿಬಿದ್ದು ಎದುರು ನೋಡುತ್ತಿದ್ದಾರೆ.

ಥಟ್ಟಂತ ರೆಡಿಯಾಗುವ ಆರೋಗ್ಯಕರ ‘ಖರ್ಜೂರದ ಪಾಯಸ’

ಕಾಯಿನ್‌ ಬಜಾರ್‌, ಕ್ವಿಕರ್‌, ಒಎಲ್‌ಎಕ್ಸ್‌ ನಂತಹ ಆಪ್‌ ಅಥವಾ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ. ಮೊದಲು ನೋಂದಣಿ ಮಾಡಿಕೊಳ್ಳಿರಿ. ಲಾಗಿನ್‌ ಐಡಿ ಮತ್ತು ಪಾಸ್‌ವರ್ಡ್‌ ಪಡೆದ ಬಳಿಕ ನಿಮ್ಮ ಬಳಿಯಿರುವ ನೋಟು ಅಥವಾ ನಾಣ್ಯದ ಚಿತ್ರವನ್ನು ತೆಗೆದು ನಿಮ್ಮ ಖಾತೆಯ ಮೂಲಕ ಮಾರುಕಟ್ಟೆಯಲ್ಲಿ ಲಿಸ್ಟಿಂಗ್‌ ಮಾಡಿರಿ.
ಇದು ಖರೀದಿದಾರರ ಗಮನಕ್ಕೆ ಬರುತ್ತದೆ. ಅದರಲ್ಲಿ ಕೆಲವು ಆಸಕ್ತರು ನಿಮ್ಮನ್ನು ಸಂಪರ್ಕಿಸಿ, ವ್ಯಾಪಾರಕ್ಕೆ ಮುಂದಾಗುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...