
ಮನೆಯಲ್ಲೇ ಕುಳಿತು ಹಣ ಗಳಿಸಬೇಕು ಎಂದು ನೀವು ಪ್ಲಾನ್ ಮಾಡ್ತಾ ಇದ್ದರೆ ಖಂಡಿತವಾಗಿಯೂ ನೀವು ಈ ಸುದ್ದಿಯನ್ನು ಓದಲೇಬೇಕು. ಹೌದು, ಮನೆಯಲ್ಲೇ ಕುಳಿತು ನೀವು ಕ್ಷಣ ಮಾತ್ರದಲ್ಲಿ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು. ಆದರೆ ಇದಕ್ಕಾಗಿ ನೀವು ಹಳೆಯ ನಾಣ್ಯಗಳನ್ನು ಹೊಂದಿರಬೇಕು.
ಯಾವುದೇ ವಸ್ತುವಾದರೂ ಸರಿ…. ಅದು ಹಳೆಯದಾಯ್ತು ಅಂದಮೇಲೆ ಪುರಾತನ ವಸ್ತುಗಳ ವಿಭಾಗದಲ್ಲಿ ಸ್ಥಾನ ಪಡೆಯುತ್ತದೆ. ಹಾಗೆಯೇ ಅವುಗಳ ಬೆಲೆ ಕೂಡ ಹೆಚ್ಚಾಗುತ್ತದೆ. ಪುರಾತನ ವಸ್ತುಗಳು ನಿಮ್ಮ ಬಳಿ ಇದ್ದರೆ ನೀವಿದನ್ನು ಚಿನ್ನದ ಬೆಲೆಗೆ ಮಾರಾಟ ಮಾಡಬಹುದು. ಅದರಲ್ಲೂ ಹಳೆಯ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಇದ್ದರಂತೂ ನೀವು ಮನೆಯಲ್ಲೇ ಕೂತು ಲಕ್ಷಾಧಿಪತಿಯಾಗಬಹುದು.
ನಿಮ್ಮ ಬಳಿ ಹಳೆಯ 2 ರೂಪಾಯಿ ನಾಣ್ಯ ಇದ್ದರೆ ನೀವು ಲಕ್ಷಾಂತರ ರೂಪಾಯಿಯವರೆಗೂ ಸಂಪಾದಿಸಬಹುದು. ಇದಕ್ಕೆ ಇರುವ ಏಕೈಕ ಷರತ್ತು ಅಂದರೆ ಈ ನಾಣ್ಯಗಳು 1994, 1995, 1997 ಅಥವಾ 2000ನೇ ಇಸ್ವಿಯದ್ದಾಗಿರಬೇಕು. ಹಾಗಿದ್ದಲ್ಲಿ ಮಾತ್ರ ಹಣ ನಿಮ್ಮ ಕೈ ಸೇರಲಿದೆ.
ನಿಮ್ಮ ಬಳಿ ಇಂತಹ ನಾಣ್ಯಗಳಿದ್ದರೆ ಅವುಗಳನ್ನು ಹೀಗೆ ಮಾರಾಟ ಮಾಡಿ :
2 ರೂಪಾಯಿ ನಾಣ್ಯಗಳನ್ನು ನೀವು ಓಎಲ್ಎಕ್ಸ್ನಲ್ಲಿ ಮಾರಾಟ ಮಾಡಬಹುದು.
ಈ ವೆಬ್ಸೈಟ್ನಲ್ಲಿ ನಿಮಗೆ ಹಳೆಯ ನಾಣ್ಯಗಳಿಗೆ ಚಿನ್ನದ ಬೆಲೆ ಸಿಗಲಿದೆ.
ಈ ನಾಣ್ಯವನ್ನು ಮಾರಾಟ ಮಾಡುವ ಮುನ್ನ ನೀವು ಒಎಲ್ಎಕ್ಸ್ನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿ.
ಇದಾದ ಬಳಿಕ ನಾಣ್ಯದ ಎರಡು ಮುಖದ ಫೋಟೋವನ್ನು ಅಪ್ಲೋಡ್ ಮಾಡಿ.
ಇದಾದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ ನಮೂದಿಸಿ.
ವೆಬ್ಸೈಟ್ಗಳಲ್ಲಿ ಕೇಳಲಾಗುವ ಮಾಹಿತಿಯನ್ನು ಪೂರ್ಣಗೊಳಿಸಿ.
ಈ ನಾಣ್ಯವನ್ನು ಖರೀದಿ ಮಾಡಲು ಇಚ್ಛಿಸುವವರು ನಿಮ್ಮನ್ನು ಸಂಪರ್ಕಿಸಲಿದ್ದಾರೆ.