ಅರೋಮ ಎಣ್ಣೆಗಳೆಂದರೆ ಒತ್ತಡ ದೂರ ಮಾಡಲು, ಸೌಂದರ್ಯ ಚಿಕಿತ್ಸೆಗಳಿಗೆ ಮಾತ್ರ ಉಪಯೋಗ ಅಂದುಕೊಳ್ಳುತ್ತಾರೆ ಕೆಲವರು. ಆದರೆ ಈ ಎಣ್ಣೆಗಳಿಂದ ಮತ್ತೊಂದಷ್ಟು ಲಾಭಗಳಿವೆ. ಅದು ಏನು ಅಂತ ತಿಳಿದುಕೊಳ್ಳೋಣ.
ಪೆಪ್ಪರ್ ಮಿಂಟ್
ತುಂಬಾ ಜ್ವರ ಬಂದಾಗ ಈ ಎಣ್ಣೆಯ ಹನಿಯನ್ನು ಅಂಗಾಲುಗಳಿಗೆ ಹಚ್ಚಿ. ದೇಹದ ಉಷ್ಣತೆ ಬಹು ಮಟ್ಟಿಗೆ ಕಡಿಮೆಯಾಗುತ್ತದೆ. ಸೈನಸ್, ಜೀರ್ಣಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ಎದುರಾಗುವ ತಲೆನೋವಿಗೆ ಪೆಪ್ಪರ್ ಮಿಂಟ್ ಎಣ್ಣೆ ತುಂಬಾ ಸಹಕಾರಿ.
ವಿಪರೀತ ಆಲಸ್ಯವಾದಾಗ ಅಥವಾ ಹೆಚ್ಚು ದೂರ ಪ್ರಯಾಣಿಸಿದಾಗ ಆಗುವ ಕಿರಿ ಕಿರಿ ದೂರ ಮಾಡಿಕೊಳ್ಳಬೇಕೆಂದರೆ ಈ ಎಣ್ಣೆಯ ವಾಸನೆ ಕುಡಿದರೆ ದೇಹ ಆರಾಮಗೊಳ್ಳುತ್ತದೆ.
ಲ್ಯಾವೆಂಡರ್
ಕಾಲಿಗೆ ಚಿಕ್ಕಪುಟ್ಟ ಗಾಯಗಳಾದಾಗ, ಚರ್ಮ ಬಿಸಿಲಿನ ಪ್ರಭಾವಕ್ಕೊಳಗಾದಾಗ ಗುಳ್ಳೆಗಳಂತಹ ಸಮಸ್ಯೆಗಳಿಗೆ ಈ ಎಣ್ಣೆ ದಿವ್ಯೌಷಧ. ಈ ಎಣ್ಣೆಯನ್ನು ಸ್ವಲ್ಪ ಲೇಪಿಸಿಕೊಂಡು ಮರ್ದನ ಮಾಡಿದರಾಯಿತು. ಅದೇ ರೀತಿ ಮಾಂಸಖಂಡಗಳಲ್ಲಿ ನೋವು, ತಲೆನೋವಿನ ಪರಿಹಾರಕ್ಕೂ ಸಹ ಇದು ಉತ್ತಮ ಔಷಧ.
ಜಿರಾನಿಯಂ
ಎಣ್ಣೆಗೆ ಸ್ವಲ್ಪ ಲ್ಯಾವೆಂಡರ್ ಎಣ್ಣೆ ಮಿಶ್ರಮಾಡಿ ದೇಹವಿಡೀ ಹಚ್ಚಿಕೊಳ್ಳಿ. ಆಗ ದೊರಕುವ ಫಲಿತಾಂಶ ವಿಶಿಷ್ಟವಾಗಿರುತ್ತದೆ. ಅಲಸಿಕೆಯಿಂದ ದೇಹಕ್ಕೆ ಉಪಶಮನ ದೊರಕುತ್ತದೆ. ಸ್ನಾಯುಗಳು ಸಹ ಚುರುಕಾಗಿ ಕಾರ್ಯ ನಿರ್ವಹಿಸುತ್ತದೆ.
ಕಾಮೊಮೈಲ್
ಚರ್ಮ ತುಂಬಾ ಶುಷ್ಕಗೊಂಡಾಗ, ನವೆ ಉಂಟಾದಾಗ ಎಕ್ಸಿಮಾ, ಆಕ್ನೆ ಅಂತಹ ಸಮಸ್ಯೆಗಳಿದ್ದಾಗ ಈ ಎಣ್ಣೆಯನ್ನು ಸ್ವಲ್ಪ ಲೇಪಿಸಿಕೊಂಡರೆ ಆಯಿತು. ಅವುಗಳಿಂದ ಉಪಶಮನ ಹೊಂದಬಹುದು.