ಮಹಿಳೆ ಹಾಗೂ ಪುರುಷರ ಲೈಂಗಿಕ ಶಕ್ತಿಯನ್ನು ಕೆಲ ಹಣ್ಣು ಹಾಗೂ ತರಕಾರಿಗಳು ಹೆಚ್ಚಿಸುತ್ತವೆ. ಹಾಗೇ ಕೆಲ ತೈಲ ಹಾಗೂ ಸುಗಂಧ ದ್ರವ್ಯ ಕೂಡ ರೋಮ್ಯಾಂಟಿಕ್ ಮೂಡ್ ಗೆ ಕಾರಣವಾಗುತ್ತದೆ.
ಪ್ರಣಯಕ್ಕೆ ಪ್ರೇರಣೆ ನೀಡುವ, ರೋಮ್ಯಾಂಟಿಕ್ ಮೂಡ್ ಗೆ ಕಾರಣವಾಗುವ ತೈಲಗಳು ಯಾವ್ಯಾವು ನೋಡೋಣ.
ಪ್ರೀತಿಯ ಪ್ರತೀಕ ಗುಲಾಬಿ. ಹಾಗೇ ಗುಲಾಬಿ ತೈಲ ಇಂದ್ರೀಯಗಳಿಗೆ ಆರಾಮ ನೀಡುವುದಲ್ಲದೆ, ಲೈಂಗಿಕತೆಗೆ ಸಂಬಂಧಿಸಿದ ಆತಂಕವನ್ನು ದೂರ ಮಾಡುತ್ತದೆ. ಎರಡು ದೇಹವನ್ನೊಂದೇ ಅಲ್ಲ, ಎರಡು ಆತ್ಮಗಳನ್ನು ಒಂದು ಮಾಡುವ ಶಕ್ತಿ ಇದಕ್ಕಿದೆ. ಗುಲಾಬಿ ನೀರಿನಲ್ಲಿ ಸ್ನಾನ ಮಾಡುವುದು ಇದೇ ಕಾರಣಕ್ಕೆ.
ಲವಂಗದ ತೈಲ ಒತ್ತಡವನ್ನು ಕಡಿಮೆ ಮಾಡಿ, ಒಳ್ಳೆಯ ಮೂಡ್ ಗೆ ಸಹಕಾರಿ.
ಶ್ರೀಗಂಧ ತೈಲದ ಪರಿಮಳ ಲೈಂಗಿಕತೆ ಬಯಕೆ ಹೆಚ್ಚಿಸುವುದಲ್ಲದೇ ಪ್ರೀತಿ ಮಾಡುವ ಶಕ್ತಿಯನ್ನು ನೀಡುತ್ತದೆ. ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಯಕೆಯನ್ನು ಹೆಚ್ಚಿಸುವುದರಿಂದ ಪುರುಷರು ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಬಳಸುತ್ತಾರೆ. ಆದ್ರೆ ಇದು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವುದಿಲ್ಲ.
ಜೀರಿಗೆ ಎಣ್ಣೆ ಲೈಂಗಿಕ ಬಯಕೆಯನ್ನು ಹೆಚ್ಚಿಸುವುದಿಲ್ಲ. ಆದ್ರೆ ಮಹಿಳೆಯರ ಸಂತಾನಕ್ಕೆ ಬಹಳ ಒಳ್ಳೆಯದು.
ಲ್ಯಾವೆಂಡರ್ ಹೂ ಗಳು ಪ್ರೀತಿಯ ಸಂಕೇತ. ಇದರ ತೈಲ ಪ್ರಣಯಕ್ಕೆ ಒಳ್ಳೆಯದು. ಇದು ಹಾರ್ಮೋನುಗಳ ಸಮತೋಲನ ಮಾಡುತ್ತದೆ. ಎದೆ, ಮಣಿಕಟ್ಟು ಮತ್ತು ಕಿವಿಯ ಹಿಂಭಾಗದಲ್ಲಿ ಇದನ್ನು ಹಚ್ಚಿಕೊಳ್ಳಬಹುದು. ವಾಸನೆ ತೆಗೆದುಕೊಳ್ಳುವುದರಿಂದಲೂ ಅದ್ಬುತ ಪರಿಣಾಮ ಕಾಣಬಹುದು.
ದಾಲ್ಚಿನಿ ತೊಗಟೆಗಳ ತೈಲ ಮನಸ್ಸನ್ನು ಶಾಂತಗೊಳಿಸುತ್ತದೆ. ಮಾನವನ ಸಂತಾನೋತ್ಪತ್ತಿ ವ್ಯವಸ್ಥೆಗೆ ಒಳ್ಳೆಯದು. ಲೈಂಗಿಕ ಸಮಸ್ಯೆಯನ್ನು ತೊಡೆದು ಹಾಕುತ್ತದೆ. ಹಾಗೆಯೇ ನಾಚಿಕೆಯನ್ನು ಹೊಡೆದೋಡಿಸುತ್ತದೆ.