ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಧೂಳಿನಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಒಂದೊಂದೇ ಸಮಸ್ಯೆ ಕಾಡಲು ಶುರುವಾಗುತ್ತದೆ. ಸುಂದರ ಚರ್ಮವುಳ್ಳ ಮುಖ ಪಡೆಯಲು ಪ್ರತಿಯೊಬ್ಬರೂ ಮಾರುಕಟ್ಟೆಯಲ್ಲಿ ಸಿಗುವ ಮೇಕಪ್ ಸಾಮಗ್ರಿಗಳ ಮೊರೆ ಹೋಗ್ತಾರೆ. ಆದ್ರೆ ಪ್ರಯೋಜನ ಶೂನ್ಯ.
ಧೂಳಿನ ನಡುವೆಯೂ ಸುಂದರ ಲುಕ್ ಪಡೆಯುವ ಆಸೆ ನಿಮಗಿದ್ದರೆ ನಿಮ್ಮ ಮೇಕಪ್ ಪಟ್ಟಿಯಲ್ಲಿ ಕರ್ಪೂರ ಹಾಗೂ ಕೊಬ್ಬರಿ ಎಣ್ಣೆಯನ್ನು ಸೇರಿಸಿ.
ಕರ್ಪೂರ ಹಾಗೂ ತೆಂಗಿನ ಎಣ್ಣೆಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಕಡಿಮೆಯಾಗುತ್ತದೆ. ಇದ್ರಿಂದ ಮುಖ ಸ್ವಚ್ಛವಾಗಿ ಕಾಣುತ್ತದೆ.
ಬಿಸಿ ನೀರಿಗೆ ಕರ್ಪೂರ ಸೇರಿಸಿ ಇದನ್ನು ಕಾಲಿನ ಹಿಮ್ಮಡಿಗಳಿಗೆ ಹಚ್ಚಿಕೊಳ್ಳುವುದರಿಂದ ಒಡೆದ ಪಾದದ ನೋವು ಕಡಿಮೆಯಾಗುತ್ತದೆ.
ಕರ್ಪೂರದ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲು ಬಲಗೊಳ್ಳತ್ತದೆ. ಮೊಸರು, ಮೊಟ್ಟೆ ಮಿಶ್ರಣಕ್ಕೆ ಕರ್ಪೂರದ ಎಣ್ಣೆ ಹಾಕಿ. ಇದನ್ನು ಕೂದಲಿಗೆ ಹಚ್ಚಿಕೊಳ್ಳಿ. ಮಿಶ್ರಣ ಒಣಗಿದ ನಂತ್ರ ತೊಳೆಯಿರಿ.
100 ಗ್ರಾಂ ತೆಂಗಿನ ಎಣ್ಣೆಗೆ ಚಿಟಕಿ ಕರ್ಪೂರವನ್ನು ಹಾಕಿ ಮಿಕ್ಸ್ ಮಾಡಿ. ಸ್ನಾನವಾದ ನಂತ್ರ ಇದನ್ನು ದೇಹಕ್ಕೆ ಹಚ್ಚಿಕೊಳ್ಳಿ. ಚರ್ಮ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತವೆ.
ಮೊಡವೆ ನಂತ್ರ ಕೆಲವರಿಗೆ ಕಪ್ಪು ಕಲೆ ಹಾಗೆ ಉಳಿದುಕೊಳ್ಳುತ್ತದೆ. ಅಂತವರು ಕೂಡ ತೆಂಗಿನ ಎಣ್ಣೆ ಜೊತೆ ಕರ್ಪೂರ ಮಿಕ್ಸ್ ಮಾಡಿ ಹಚ್ಚಿಕೊಳ್ಳಬೇಕು.
ಸುಟ್ಟ ಅಥವಾ ಇನ್ನಾವುದೋ ಕಾರಣದಿಂದ ಕೆಲವರ ಚರ್ಮದ ಮೇಲೆ ಕಲೆ ಉಳಿದಿರುತ್ತದೆ. ಅದು ನೋಡಲು ಕೆಟ್ಟದಾಗಿ ಕಾಣುತ್ತದೆ. ಅಂತ ಕಲೆ ಇದ್ದಲ್ಲಿ ಕರ್ಪೂರವನ್ನು ನೀರಿನಲ್ಲಿ ಒದ್ದೆ ಮಾಡಿ ಅದನ್ನು ಕಲೆಯ ಜಾಗಕ್ಕೆ ಹಚ್ಚುತ್ತ ಬಂದರೆ ಕಲೆ ಮಾಯವಾಗುತ್ತದೆ.