
ಅಗಸೆ ಬೀಜ ಕೂದಲಿನ ಆರೈಕೆಗೆ ತುಂಬಾ ಉತ್ತಮ. ಇದು ಕೂದಲಿನ ಸಮಸ್ಯೆಗಳನ್ನು ನಿವಾರಣೆ ಮಾಡಿ ಕೂದಲನ್ನು ಆರೋಗ್ಯವಾಗಿಡುತ್ತದೆ. ಹಾಗಾಗಿ ಅಗಸೆ ಬೀಜದ ಎಣ್ಣೆಯನ್ನು ಕೂದಲಿಗೆ ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳಿ.
ಅಗಸೆ ಬೀಜದ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿ 15 ನಿಮಿಷ ಬಿಟ್ಟು ವಾಶ್ ಮಾಡಿ. ಇದರಿಂದ ಕೂದಲುದುರುವ ಸಮಸ್ಯೆ ದೂರವಾಗಿ ದಟ್ಟವಾದ ಕೂದಲು ಬೆಳೆಯುತ್ತದೆ.
ಇಲ್ಲವಾದರೆ ನೀವು ಸ್ನಾನ ಮಾಡಿದ ಬಳಿಕ ಕಂಡಿಷನರ್ ಹಚ್ಚುವ ಮೊದಲು ಈ ಅಗಸೆಬೀಜದ ಎಣ್ಣೆಯಿಂದ ಮಸಾಜ್ ಮಾಡಿ ಸ್ವಲ್ಪ ಹೊತ್ತು ಬಿಟ್ಟು ಬಳಿಕ ವಾಶ್ ಮಾಡಿ ಕಂಡಿಷನರ್ ಹಚ್ಚಿ. ಇದರಿಂದ ಕೂದಲು ಮೃದುವಾಗಿ ಹೊಳೆಯುತ್ತದೆ.
ಹಾಗೇ ಈ ಎಣ್ಣೆಯನ್ನು ಹೇರ್ ಜೆಲ್ ಆಗಿ ಬಳಸಬಹುದು. ಅಲ್ಲದೇ ಅಗಸೆ ಬೀಜದ ಎಣ್ಣೆಯನ್ನು ಸೇವನೆ ಕೂಡ ಮಾಡಬಹುದು. ಇದರಿಂದ ಕೂದಲು ಆರೋಗ್ಯವಾಗಿರುತ್ತದೆ.