ಮನುಷ್ಯನ ಆರೋಗ್ಯ ಉತ್ತವಾಗಿರುವಲ್ಲಿ, ಆಹಾರದ ಪಾತ್ರ ಬಹುಮುಖ್ಯ. ಇದನ್ನೇ ಬಂಡವಾಳ ಮಾಡಿಕೊಂಡು ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ಅನೇಕ ರೀತಿಯ ಪೌಷ್ಠಿಕ ಆಹಾರಗಳನ್ನ ಪರಿಚಯಿಸಿದ್ದಾರೆ. ಝಿರೋ ಶುಗರ್, ಫೈಬರ್, ಮಲ್ಟಿಗ್ರೇನ್ ಹೀಗೆ ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಆಹಾರ ಪದಾರ್ಥಗಳು ಈಗ ಲಭ್ಯ. ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತ ಫೋಟೋ ನೋಡ್ತಿದ್ರೆ ನೀವು ಶಾಕ್ ಆಗ್ತಿರಾ..? ಅಷ್ಟೆ ಅಲ್ಲ ಇದೆಂಥ ಹುಚ್ಚಾಟ ಅಂತ ಕೂಡ ಹೇಳ್ತಿರಾ..? ಅಷ್ಟಕ್ಕೂ ಆಗಿದ್ದಾದರೂ ಏನು ಅಂತ ಈ ಫೋಟೋ ನೋಡಿ.
ಪೊರಕೆ ಕವರ್ ಮೇಲೆ ಬರೆದಿರುವ ಬರಹ ನೋಡಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಕಾರಣ ಈ ಕವರ್ ಮೇಲೆ ಇದು ಪೌಷ್ಠಿಕ ಅಂಶವುಳ್ಳ ಪೊರಕೆ ಎಂದು ಬರೆಯಲಾಗಿದ್ದು, ಇದರಲ್ಲಿ ಕ್ಯಾಲರಿ ಬಗ್ಗೆಯೂ ಬರೆದಿರುವುದನ್ನ ನೋಡಬಹುದು. ಆಹಾರದಲ್ಲಿ ಪೌಷ್ಠಿಕ ಅಂಶ, ಕ್ಯಾಲರಿ ಬಗ್ಗೆ ಇರುವುದು ಕಾಮನ್. ಆದರೆ ಪೊರಕೆಗೂ ಈ ಅಂಶಗಳಿಗೂ ಎತ್ತಣದಿಂದ ಎತ್ತಣ ಸಂಬಂಧ ಅನ್ನುವುದು ನೆಟ್ಟಿಗರ ಪ್ರಶ್ನೆ.
ಪ್ರತಿಯೊಬ್ಬರ ಮನೆಯಲ್ಲೂ ಪೊರಕೆ ಇದ್ದೇ ಇರುತ್ತೆ. ಮನೆಯನ್ನ ಸ್ವಚ್ಛಗೊಳಿಸುವುದಕ್ಕೆ ಪೊರಕೆ ಬೇಕೇಬೇಕು. ಆದರೆ ಈಗ ಪೊರಕೆ ಇಟ್ಟುಕೊಂಡು ಲಾಭ ಮಾಡಿಕೊಳ್ಳುವುದಕ್ಕೆ ಹೊರಟಿರುವ ಈ ವ್ಯಾಪಾರಿಗಳು ಹೊಸ ಗಿಮಿಕ್ ಮಾಡಿದ್ದಾರೆ.
ಅಂಗಡಿಯೊಂದರ ಹೊರಗೆ ಇಟ್ಟ ಈ ಪೊರಕೆ ಹಾಗೂ ಕವರ್‌ಗಳ ಫೋಟೋ ತೆಗೆದು ಜಯೇಶ್ ಅನ್ನುವವರು ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಾಗೂ ಶೀರ್ಷಿಕೆಯಲ್ಲಿ’ಕ್ಯಾಲರಿ ಕುರಿತು ಅಲರ್ಟ್ ಕೊಡುತ್ತಿರುವ ಪೊರಕೆ’ ’ಹಾಗಂತ ಇದನ್ನ ನೀವು ತಿಂಡಿ ಅಂತ ನಿರ್ಧರಿಸಬೇಡಿ’ ಎಂದಿದ್ದಾರೆ.
ಈಗಾಗಲೇ ಈ ಟ್ವಿಟ್ಟರ್ ಪೋಸ್ಟ್ 32kನಷ್ಟು ಜನ ವೀಕ್ಷಿಸಿದ್ದಾರೆ. ಇನ್ನೂ ಕಾಮೆಂಟ್ ಸೆಕ್ಷನ್‌ನಲ್ಲಂತೂ ಇದರು ಕುರಿತು ಕಾಮೆಂಟ್‌ಗಳ ಸುನಾಮಿಯೇಎದ್ದಂತಿದೆ. ಕೆಲವರು ಇದು ಮಾರ್ಕೆಟಿಂಗ್ ಗಿಮಿಕ್ ಅಂತ ಹೇಳದ್ರೆ ಇನ್ನು ಕೆಲವರು ಇದೇ ಪೊರಕೆ ಹಿಡಿದುಕೊಂಡು ಗುಡಿಸಿದರೆ ಕ್ಯಾಲರಿ ತನ್ನಿಂದ ತಾನೇ ಬರ್ನ್ ಆಗುತ್ತೆ. ಎಂದು ಹೇಳಿದ್ಧಾರೆ. ಇನ್ನೊಬ್ಬರಂತೂ ’ಇದು ಗಂಡನ ವಿರುದ್ಧ ಹೆಂಡತಿ ಬಳಸುವ ಸಾಧನ’ ಎಂದು ಹೇಳಿದ್ದಾರೆ.