ಗೋಲ್ಗಪ್ಪಾ ಅಥವಾ ಪಾನಿಪುರಿ ಎಂದರೆ ಬಹುತೇಕ ಎಲ್ಲರಿಗೂ ಫೇವರಿಟ್. ಇದೊಂದು ಜಂಕ್ ಫುಡ್ ಅನ್ನೋ ಭಾವನೆ ಕೂಡ ಬಹುತೇಕರಲ್ಲಿದೆ. ಆದರೆ ಈ ಸ್ಟ್ರೀಟ್ ಫುಡ್ ಆರೋಗ್ಯದ ನಿಧಿ. ಪಾನಿಪುರಿಯಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ. ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಇದು ಹೋಗಲಾಡಿಸುತ್ತದೆ. ಮಧುಮೇಹ ರೋಗಿಗಳು ಸಹ ಯಾವುದೇ ಟೆನ್ಶನ್ ಇಲ್ಲದೆ ಪಾನಿಪುರಿ ತಿನ್ನಬಹುದು. ಪಾನಿಪುರಿ ತಯಾರಿಸಲು ಬಳಸುವ ಪದಾರ್ಥಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳು ಇರುತ್ತವೆ. ಮನೆಯಲ್ಲೇ ಪಾನಿಪುರಿ ಮಾಡಿಕೊಂಡು ತಿನ್ನುವುದು ಇನ್ನೂ ಉತ್ತಮ.
ಬಾಯಿ ಹುಣ್ಣಿಗೆ ಮದ್ದು
ಪಾನಿಪುರಿಗೆ ಬಳಸುವ ವಸ್ತುಗಳಲ್ಲಿ ಮೆಗ್ನೀಸಿಯಮ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಫೋಲೇಟ್, ಸತು ಮತ್ತು ವಿಟಮಿನ್ ಎ, ಬಿ -6, ಬಿ -12, ಸಿ ಮತ್ತು ಡಿ ಇರುತ್ತದೆ. ಇವು ನಮ್ಮ ದೇಹಕ್ಕೆ ಪ್ರಯೋಜನಕಾರಿ. ಜಲ್ಜೀರಾ ಪಾನಿ ಮತ್ತು ಪುದೀನಾ ನಮ್ಮ ಬಾಯಿ ಹುಣ್ಣುಗಳನ್ನು ಗುಣಪಡಿಸುತ್ತದೆ.
ರಕ್ತದಲ್ಲಿನ ಸಕ್ಕರೆ ನಿಯಂತ್ರಣ
ಮಧುಮೇಹಿಗಳು ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು. ಏಕೆಂದರೆ ತಿನ್ನುವುದರಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅವರ ಸಕ್ಕರೆಯ ಪ್ರಮಾಣ ಹೆಚ್ಚುತ್ತದೆ. ಆದರೆ ಕಡಿಮೆ ಕ್ಯಾಲೋರಿಗಳ ಕಾರಣ, ಪಾನಿಪುರಿಯನ್ನು ಸಕ್ಕರೆ ಕಾಯಿಲೆ ಇರುವವರು ಕೂಡ ತಿನ್ನಬಹುದು. ಆದರೆ ಅತಿಯಾದ ಸೇವನೆ ಬೇಡ.
ಅಸಿಡಿಟಿಗೆ ಪರಿಹಾರ ಪಾನಿಪುರಿಗೆ ಬಳಸುವ ಜಲ್ಜೀರಾ ಪಾನಿ ಬಾಯಿಯ ದುರ್ವಾಸನೆ ತಡೆಯುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜಲ್ಜೀರಾ ಪಾನಿಗೆ ಬಳಸುವ ಪುದೀನಾ ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳಿಂದ ತುಂಬಿರುತ್ತದೆ. ಇದು ನಮ್ಮ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಅಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ. ಶುಂಠಿ, ಜೀರಿಗೆ, ಪುದೀನಾ, ಬ್ಲಾಕ್ ಸಾಲ್ಟ್, ಕೊತ್ತಂಬರಿ ಸೊಪ್ಪು ಇವನ್ನೆಲ್ಲಾ ಬೆರೆಸಿ ಪಾನಿ ತಯಾರಿಸಲಾಗುತ್ತದೆ. ಇವೆಲ್ಲವೂ ಅನೇಕ ಔಷಧೀಯ ಗುಣಗಳನ್ನು ಹೊಂದಿವೆ.
ಬೊಜ್ಜು ಕಡಿಮೆ ಮಾಡಲು ಸಹಕಾರಿ
ಬೊಜ್ಜು ಕಡಿಮೆ ಮಾಡುವಲ್ಲಿಯೂ ಪಾನಿಪುರಿ ಸಹಕಾರಿ. ಇದಕ್ಕೆ ಬಟಾಣಿ ಬಳಸಲಾಗುತ್ತದೆ. ಇದರಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿದ್ದು, ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಹಿ ಪುರಿಯನ್ನು ಸೇವಿಸಿದರೆ ಹೆಚ್ಚಿನ ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು.
ಮೂತ್ರದ ಸಮಸ್ಯೆ ದೂರವಾಗುತ್ತದೆ
ಪಾನಿಪುರಿಯಲ್ಲಿ ಕೊತ್ತಂಬರಿ ಸೊಪ್ಪನ್ನು ಬಳಸುತ್ತಾರೆ. ಇದು ವಾಯು ಮತ್ತು ಮೂತ್ರದ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಪಾನಿಯಲ್ಲಿರುವ ಇಂಗು ಕೂಡ ಗ್ಯಾಸ್ ಸಮಸ್ಯೆಗೆ ಪರಿಹಾರ ನೀಡಬಲ್ಲದು. ಮಹಿಳೆಯರಿಗೆ ಪಿರಿಯಡ್ಸ್‌ನಿಂದ ಉಂಟಾಗುವ ನೋವನ್ನು ಸಹ ಇದು ಕಡಿಮೆ ಮಾಡುತ್ತದೆ. ಹೊಟ್ಟೆಯ ಅಸ್ವಸ್ಥತೆಗಳನ್ನು ಸಹ ಗುಣಪಡಿಸುತ್ತದೆ.