ನಮ್ಮ ದೇಶದಲ್ಲಿ ಸೊಳ್ಳೆ ಕಾಮನ್. ಜನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಪ್ರಪಂಚದಾದ್ಯಂತ ಸೊಳ್ಳೆ ಕಡಿತದಿಂದ ಉಂಟಾದ ರೋಗಗಳಿಂದಾಗಿ ಪ್ರತಿ ವರ್ಷ ಒಂದು ದಶಲಕ್ಷಕ್ಕೂ ಹೆಚ್ಚು ಜನರು ಸಾಯುತ್ತಾರೆ ಎಂಬ ಮಾಹಿತಿ ಇತ್ತು, ಸುಮಾರು 3,000 ವಿವಿಧ ತಳಿಗಳ ಸೊಳ್ಳೆಗಳು ಅಸ್ತಿತ್ವದಲ್ಲಿವೆ.
ಅಚ್ಚರಿಯ ವಿಷಯ ಎಂದರೆ ಉತ್ತರ ಅಟ್ಲಾಂಟಿಕ್ ದೇಶದಲ್ಲಿ ಸೊಳ್ಳೆಯೇ ಇಲ್ಲ. ಪ್ರಪಂಚದ ಕೆಲವೇ ಸೊಳ್ಳೆ ಮುಕ್ತ ರಾಷ್ಟ್ರಗಳಲ್ಲಿ ಇದೂ ಒಂದಾಗಿದೆ.
ಐಸ್ಲ್ಯಾಂಡ್ನಲ್ಲಿ ಸೊಳ್ಳೆಗಳು ಮಾತ್ರವಲ್ಲ, ಹಾವುಗಳೂ ಇಲ್ಲ. ಕೆಲವು ಜಾತಿಯ ಜೇಡಗಳು ಇಲ್ಲಿ ಕಂಡುಬರುತ್ತವೆಯಾದರೂ, ಅವುಗಳಲ್ಲಿ ಯಾವುದೂ ಮನುಷ್ಯರಿಗೆ ಮಾರಕವಾಗುವುದಿಲ್ಲ.
ಚಳಿಯು ಸೊಳ್ಳೆ, ಉಣ್ಣೆ ಮತ್ತು ಹಾವುಗಳನ್ನು ದೂರವಿಡುವುದು ಎಂದು ವ್ಯಾಪಕವಾಗಿ ನಂಬಲಾಗಿದೆ. ಸೊಳ್ಳೆಗಳು ಆಕ್ಟಿರ್ಕ್ ಚಳಿಗಾಲದಲ್ಲಿ ಕಡಿಮೆ ತಾಪಮಾನವನ್ನು ತಡೆದುಕೊಳ್ಳಬಲ್ಲವು, ಆದರೆ ಅವು ಐಸ್ಲ್ಯಾಂಡಿಕ್ ಹವಾಮಾನಕ್ಕೆ ಹೊಂದಿಕೊಳ್ಳುವುದಿಲ್ಲ. ಯಾವುದೇ ಐಸ್ಲ್ಯಾಂಡಿಕ್ ಸರೋವರದಲ್ಲಿ ವಾತಾವರಣವು ಸೊಳ್ಳೆಗಳನ್ನು ಸಂತಾನೋತ್ಪತ್ತಿ ಮಾಡುವುದನ್ನು ತಡೆಯುತ್ತದೆ. ಲೈಂಗಿಕ ಪ್ರಬುದ್ಧತೆಯನ್ನು ಸಾಧಿಸುವ ಮೊದಲೇ ಮರಗಟ್ಟಿ ಹೋಗುತ್ತದೆ.
ಇನ್ನೊಂದು ಸಿದ್ಧಾಂತವೆಂದರೆ ಐಸ್ಲ್ಯಾಂಡ್ನ ನೀರು, ಮಣ್ಣು ಮತ್ತು ಸಾಮಾನ್ಯ ಪರಿಸರ ವ್ಯವಸ್ಥೆಯ ರಾಸಾಯನಿಕ ಸಂಯೋಜನೆಯು ಸೊಳ್ಳೆಗಳ ಜೀವನವನ್ನು ಬೆಂಬಲಿಸುವುದಿಲ್ಲ.
ಪ್ರಯಾಣಿಕರು ಮತ್ತು ಶಿಬಿರಾರ್ಥಿಗಳು ಐಸ್ಲ್ಯಾಂಡ್ನಲ್ಲಿ ಕ್ಯಾಂಪಿಂಗ್ ಮಾಡುವಾಗ ಕೀಟಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಅವರು ಚಿಂತಿಸಬೇಕಾದ ಏಕೈಕ ವಿಷಯವೆಂದರೆ ಆಕ್ಟಿರ್ಕ್ ನರಿ, ಇದು ಮನುಷ್ಯರಿಗೆ ಅಪಾಯಕಾರಿ ಎನಿಸಿದೆ.