alex Certify ಮಗಳಿಂದ ತಾಯಿ ಪಡೀತಾಳೆ ಮನೆ ಬಾಡಿಗೆ…! ಇದರ ಹಿಂದಿದೆ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳಿಂದ ತಾಯಿ ಪಡೀತಾಳೆ ಮನೆ ಬಾಡಿಗೆ…! ಇದರ ಹಿಂದಿದೆ ಕಾರಣ

This New Zealand Mother Takes Rent From Daughter. Here are Her Reasonsಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಹೆಚ್ಚಿನ ಪೋಷಕರು ತಮ್ಮ ಮಕ್ಕಳಿಗೆ ಅವರು ಕೇಳಿದ್ದನ್ನು ಕೊಟ್ಟು ಬಿಡುತ್ತಾರೆ. ಇನ್ನೂ ಕೆಲವರು ಮಕ್ಕಳಿಗೆ ಕಷ್ಟದ ಬಗ್ಗೆ ಅರಿವಾಗಬೇಕೆಂದು ಹಲವಾರು ಷರತ್ತುಗಳ್ನು ವಿಧಿಸುತ್ತಾರೆ. ಹಾಗೆಯೇ ನ್ಯೂಜಿಲೆಂಡ್‌ನಲ್ಲಿರುವ ಮಹಿಳೆಯೊಬ್ಬರು ಟಿಕ್‌ಟಾಕ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ.

ತಮ್ಮ ಮನೆಯಲ್ಲಿ ವಾಸಿಸಬೇಕೆಂದ್ರೆ ತನ್ನ ಮಕ್ಕಳಿಂದ ಬಾಡಿಗೆ ಪಡೆಯುವುದಾಗಿ ಟಿಕ್ ಟಾಕ್ ನಲ್ಲಿ ಹೇಳಿದ್ದಾರೆ. ಇದು ಆನ್‌ಲೈನ್‌ನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ತನ್ನ ಪುತ್ರಿಯ ಜೊತೆಗೆ ಆಟವಾಡಿದ ಕೇಟ್, ಪೆನ್ ಅನ್ನು ಕಪ್ ಗೆ ಎಸೆಯಬೇಕು ಎಂದು ಹೇಳಿದ್ದಾಳೆ. ಈ ಆಟದಲ್ಲಿ ಕೇಟ್ ಮಗಳು 18 ವರ್ಷದ ಲತೀಶಾ ಸೋತಿದ್ದಾಳೆ. ಆಟದಲ್ಲಿ ಸೋತ ಮಗಳಿಗೆ, ಮುಂದಿನ ವರ್ಷದಿಂದ ಮನೆಯಲ್ಲಿ ವಾಸ ಮಾಡಬೇಕಂದ್ರೆ ಬಾಡಿಗೆ ಪಾವತಿಸಬೇಕು ಎಂದು ವಿಶಿಷ್ಠ ಷರತ್ತು ಇಟ್ಟಿದ್ದಾಳೆ,

ಇದೀಗ, ಈ ವಿಡಿಯೋ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ. ಹಲವಾರು ಮಂದಿ ತಮ್ಮದೇ ಆದಂತಹ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಆದರೆ, ನಕಾರಾತ್ಮಕ ಕಾಮೆಂಟ್‌ಗಳು ತನಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಟ್ ಹೇಳಿದ್ದಾರೆ. ಕೇಟ್ ಮಗಳು ಪ್ರತಿ ತಿಂಗಳು 2600 ರೂಪಾಯಿ ಬಾಡಿಗೆ ನೀಡಬೇಕಾಗಿದೆ. ಏನೂ ಉಚಿತವಲ್ಲದ ಈ ಪ್ರಪಂಚದ ಬಗ್ಗೆ ತನ್ನ ಮಗಳಿಗೆ ಈ ಮೂಲಕ ಕಲಿಸಲು ತಾಯಿ ಬಯಸಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆದ ನಂತರ, ಕೇಟ್ ಳ ಈ ನಿರ್ಧಾರಕ್ಕೆ ಅನೇಕರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಮಗಳ ಬಾಡಿಗೆಯನ್ನು ಯಾರು ತೆಗೆದುಕೊಳ್ಳುತ್ತಾರೆ ? ಇದು ನಾಚಿಕೆಗೇಡು ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...