ಕಂಪ್ಯೂಟರ್ ಕ್ಷೇತ್ರದಲ್ಲಿ ವೈರಸ್ ಹಾವಳಿ ವಿಪರೀತ, ಇನ್ನೊಂದು ಕಡೆ ಹ್ಯಾಕಿಂಗ್, ಇಷ್ಟೇ ಅಲ್ಲದೇ ಕಳ್ಳದಾರಿಯಲ್ಲಿ ಕಂಪ್ಯೂಟರ್, ಮೊಬೈಲ್ ಒಳಗೆ ನುಸುಳಿ ನಮ್ಮನ್ನೇ ನಿಯಂತ್ರಿಸುವ ಪಾತಕಿ ತಂತ್ರಜ್ಞಾನದ ಹಾವಳಿ ಹೆಚ್ಚಿದೆ.
ಇದೀಗ ಶಾಕಿಂಗ್ ನ್ಯೂಸ್ ಬಂದಿದೆ. ಹೊಸ ಮಾಲ್ವೇರ್ ಜಾಗತಿಕವಾಗಿ ಸದ್ದು ಮಾಡುತ್ತಿದ್ದು, ಇದು ನಮ್ಮ ಸಾಮಾಜಿಕ ಜಾಲತಾಣವನ್ನೂ ನಮ್ಮ ಅರಿವಿಗೆ ಬಾರದಂತೆ ನಿಯಂತ್ರಿಸುತ್ತದೆಯಂತೆ.
“ಮಾಲ್‌ವೇರ್” ಕಳ್ಳದಾರಿಯಲ್ಲಿ ಒಳನುಗ್ಗುವ ಸಾಫ್ಟ್‌ವೇರ್ ಆಗಿದ್ದು, ಅದು ಕಂಪ್ಯೂಟರ್‌ಗಳು ಮತ್ತು ಕಂಪ್ಯೂಟರ್ ಸಿಸ್ಟಮ್‌ಗಳನ್ನು ಹಾನಿಗೊಳಿಸಲು ಮತ್ತು ನಾಶಮಾಡಲು ವಿನ್ಯಾಸಗೊಳಿಸಲಾಗಿದೆ. ಅದೀಗ ಜಾಲತಾಣದೊಳಗೆ ಅಡಗಿ ಕುಳಿತುಕೊಳ್ಳುವಂತೆ ರೂಪಾಂತರವೂ ಮಾಡಲಾಗಿದೆ.
BIG NEWS: ರಷ್ಯಾ ವಿರುದ್ಧ ಹೋರಾಡಲು ಕರೆ; ನಾಗರಿಕರ ಕೈಗೆ 10,000 ಬಂದೂಕು ಕೊಟ್ಟ ಉಕ್ರೇನ್
ಈಗಾಗಲೇ 20 ದೇಶದಲ್ಲಿ ಇದರ ಪ್ರಭಾವ ಕಾಣಿಸಿದೆ. ವರದಿಯ ಪ್ರಕಾರ, ಟೆಕ್ ವೇದಿಕೆಯಲ್ಲಿ ಇರುವ ಆ್ಯಪ್, ಗೇಮ್‌ಗಳು ಈ ಡೇಂಜರಸ್ ಮಾಲ್‌ವೇರ್ ಅನ್ನು ಹೊಂದಿದೆ ಎಂಬುದನ್ನು ಸೈಬರ್ ಸೆಕ್ಯುರಿಟಿ ಕ್ಷೇತ್ರದ ಸಂಶೋಧಕರು ಕಂಡುಕೊಂಡಿದ್ದಾರೆ. ‘ಟೆಂಪಲ್ ರನ್’ ನಂತಹ ಆಟ ಮತ್ತು ‘ಸಬ್ವೇ ಸರ್ಫರ್’ ನಂತಹ ಜನಪ್ರಿಯ ವೇದಿಕೆಯಲ್ಲೂ ಇದು ಕಾಣಿಸಿದೆ ಎಂದು ಹೇಳಲಾಗಿದೆ.
ಎಲೆಕ್ಟ್ರಾನ್ ಬಾಟ್ ಮಾಲ್ವೇರ್ ಪಿಸಿಯಲ್ಲಿ ಗೇಮ್ ಅಥವಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ಅಪ್ಲಿಕೇಶನ್ ಅಥವಾ ಆಟವು ಸ್ಕ್ರಿಪ್ಟ್‌ಗಳನ್ನು ಕಾರ್ಯಗತಗೊಳಿಸುತ್ತದೆ. ಇದರೊಂದಿಗೆ ಪಿಸಿಯನ್ನು ಮಾಲ್ವೇರ್ ಆವರಿಸಿಕೊಳ್ಳುತ್ತದೆ.
ಬಳಿಕ ಸೈಬರ್ ಅಪರಾಧಿಗಳು ಹುಡುಕಾಟ ನಡೆಸಲು ಬಳಸಬಹುದು. ಕೀ ವರ್ಡ್‌ಗಳು, ಹುಡುಕಾಟದ ಫಲಿತಾಂಶ ಮೂರನೇ ವ್ಯಕ್ತಿಗೆ ತಿಳಿಯಬಹುದು. ಮಾಲ್ವೇರ್ ಕೂಡ ನಿಮ್ಮ ಸಾಮಾಜಿಕ ಮಾಧ್ಯಮವನ್ನು ವಶಪಡಿಸಿಕೊಳ್ಳುತ್ತದೆ. ಆ ಮೂಲಕ ಅನಧಿಕೃತವಾಗಿ ಪ್ರಚಾರಗಳನ್ನು ನಡೆಸಲೂಬಹುದು.
ಸದ್ಯದ ಮಾಹಿತಿ ಪ್ರಕಾರ ಜಗತ್ತಿನಲ್ಲಿ ಈವರೆಗೆ ಐದು ಸಾವಿರಕ್ಕಿಂತ ಹೆಚ್ಚುಮಂದಿ ಮಾಲ್ವೇರ್‌ನಿಂದ ಸಂತ್ರಸ್ತರಾಗಿದ್ದಾರೆ.