ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಹಾಗಾಗಿ ಆರೋಗ್ಯಕರ ಜೀವನ ಶೈಲಿಯನ್ನೇ ಅವರು ಅಳವಡಿಸಿಕೊಳ್ಳಬೇಕು. ಸಕ್ಕರೆ ಪ್ರಮಾಣ ಅಧಿಕವಾಗದಂತೆ ಅಥವಾ ಕಡಿಮೆಯಾಗದಂತೆ ತಡೆಯಲು ಸಮಯಕ್ಕೆ ಔಷಧಿಗಳನ್ನು ತೆಗೆದುಕೊಳ್ಳಬೇಕು.
ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ, ಡಾ.ಮೈಕೆಲ್ ಮೊಸ್ಲೆ ಸಿದ್ಧಪಡಿಸಿದ 5:2 ಡಯಟ್ ಪ್ಲಾನ್, ಟೈಪ್ 2 ಮಧುಮೇಹದಿಂದ ಬಳಲುತ್ತಿರುವವರಿಗೆ ಔಷಧಿಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗ್ತೊದೆ. ಔಷಧಿ ಇಲ್ಲದೆ ಮಧುಮೇಹವನ್ನು ನಿಯಂತ್ರಿಸಲು ಬಯಸಿದರೆ ಈ ಆಹಾರ ಕ್ರಮವನ್ನು ಪ್ರಯತ್ನಿಸಬಹುದು.
5:2 ಡಯಟ್ ಪ್ಲಾನ್ ಎಂದರೇನು?
5:2 ಡಯಟ್ ಪಾನ್, ಇಂಟರ್‌ಮಿಟ್ಟೆಂಟ್ ಫಾಸ್ಟಿಂಗ್ ಅನ್ನೇ ಹೋಲುತ್ತದೆ. ಇದು ಐದು ದಿನಗಳವರೆಗೆ ಯಾವುದೇ ಇಂದ್ರಿಯನಿಗ್ರಹವಿಲ್ಲದೆ ತಿನ್ನುವುದು ಮತ್ತು ಸತತ ಎರಡು ದಿನಗಳವರೆಗೆ ಕ್ಯಾಲೊರಿಗಳನ್ನು 500-600 ರಷ್ಟು ಕಡಿತಗೊಳಿಸುವುದು. ಸೀಮಿತ ಕ್ಯಾಲೋರಿಗಳೊಂದಿಗೆ ಒಂದು ದಿನದ ನಂತರ, ದೇಹವು ಕೊಬ್ಬನ್ನು ಸುಡಲು ಆಹಾರದಿಂದ ಉತ್ಪತ್ತಿಯಾಗುವ ಶಕ್ತಿಯನ್ನು ಬಳಸಲು ಪ್ರಾರಂಭಿಸುತ್ತದೆ. ಈ ಡಯಟ್ ಅನುಸರಿಸುವುದು ಗ್ಲೈಸೆಮಿಕ್ ನಿಯಂತ್ರಿಸಲು ಮಾತ್ರವಲ್ಲದೆ ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
405 ವಯಸ್ಕರ ಮೇಲೆ ನಡೆಸಿದ ಈ ಅಧ್ಯಯನದಲ್ಲಿ, ಮೆಟ್‌ಫಾರ್ಮಿನ್ ಮತ್ತು ಎಂಪಾಗ್ಲಿಫ್ಲೋಜಿನ್‌ಗೆ ಹೋಲಿಸಿದರೆ 5:2 ಆಹಾರಕ್ರಮವು ಉತ್ತಮ ಗ್ಲೈಸೆಮಿಕ್ ನಿಯಂತ್ರಣಕ್ಕೆ (ರಕ್ತದಲ್ಲಿನ ಗ್ಲೂಕೋಸ್ ಮಟ್ಟ) ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ಇದು ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ.
5:2 ಆಹಾರಕ್ರಮವನ್ನು ಅನುಸರಿಸಿದ ಮಧುಮೇಹ ರೋಗಿಗಳು ಮೂರು ತಿಂಗಳಲ್ಲಿ ಸರಾಸರಿ HbA1C ರಕ್ತದ ಸಕ್ಕರೆಯಲ್ಲಿ ಗಮನಾರ್ಹ ಕುಸಿತವನ್ನು ಕಂಡಿದ್ದಾರೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ. ಇದಲ್ಲದೆ ಅವರ ಸೊಂಟದ ಕೊಬ್ಬು ಸಹ ಕಡಿಮೆಯಾಗಿತ್ತು. ಆದರೆ ಈ ಡಯಟ್ ಅನುಸರಿಸುವ ಮುನ್ನ ವೈದ್ಯರ ಸಲಹೆ ಕೂಡ ಪಡೆಯುವುದು ಉತ್ತಮ.