ಆಕರ್ಷಕ, ಹೊಳಪಿನ ಮುಖವನ್ನು ಎಲ್ಲರೂ ಬಯಸ್ತಾರೆ. ಕೆಲಸದ ಒತ್ತಡದಲ್ಲಿ ಮುಖದ ಆರೈಕೆಗೆ ಹೆಚ್ಚು ಗಮನ ನೀಡಲು ಅನೇಕರಿಗೆ ಸಾಧ್ಯವಾಗುವುದಿಲ್ಲ. ಪುರುಷರು ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಆದ್ರೆ ಮುಖದ ಸೌಂದರ್ಯಕ್ಕೆ ಪ್ರತಿಯೊಬ್ಬರೂ ಮಹತ್ವ ನೀಡಬೇಕು. ಆಕರ್ಷಕ ಮುಖಕ್ಕಾಗಿ ಮನೆ ಮದ್ದು ಬಳಸಬಹುದು.
ಬೇವು, ಅತ್ಯುತ್ತಮ ನೈಸರ್ಗಿಕ ಪದಾರ್ಥಗಳಲ್ಲಿ ಒಂದಾಗಿದೆ. ಇದು ಚರ್ಮ ಹೊಳಪನ್ನು ಕಾಪಾಡಿಕೊಳ್ಳಲು ಉತ್ತಮ ಮಾರ್ಗವಾಗಿದೆ. ಬೇವನ್ನು ಸ್ವಚ್ಛಗೊಳಿಸಿ, ಉತ್ತಮ ರೀತಿಯಲ್ಲಿ ಬಳಸುವುದು ಮುಖ್ಯ.
ಬೇವು-ಮುಲ್ತಾನಿ ಮಿಟ್ಟಿ ಫೇಸ್ ಮಾಸ್ಕ್ ಬಳಸಿ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕೆ 15 ಬೇವಿನ ಎಲೆಗಳು, 2 ಚಮಚ ರೋಸ್ ವಾಟರ್, 2 ಚಮಚ ಮುಲ್ತಾನಿ ಮಿಟ್ಟಿಯನ್ನು ಬಳಸಬೇಕು. ಮೊದಲು ಬೇವಿನ 10-15 ಎಲೆಗಳನ್ನು ರುಬ್ಬಿ ಪೇಸ್ಟ್ ಮಾಡಿ. ಅದಕ್ಕೆ ಸ್ವಲ್ಪರೋಸ್ ವಾಟರ್ ಹಾಕಿ. ಈ ಮಿಶ್ರಣಕ್ಕೆ 2 ಟೀ ಚಮಚ ಮುಲ್ತಾನಿ ಮಿಟ್ಟಿ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ನಂತ್ರ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ.
ಇನ್ನೊಂದು ಜೇನು ಮತ್ತು ಬೇವಿನ ಫೇಸ್ ವಾಶ್ :
ಒಂದು ಪಿಂಚ್ ದಾಲ್ಚಿನ್ನಿ, 10 ಬೇವಿನ ಎಲೆಗಳು, 2 ಚಮಚ ಜೇನುತುಪ್ಪ ಬೆರೆಸಿ ಫೇಸ್ ಪ್ಯಾಕ್ ಮಾಡಿ.
ಮೊದಲು ಪೇಸ್ಟ್ ತಯಾರಿಸಲು 10-12 ಬೇವಿನ ಎಲೆಗಳನ್ನು ಪುಡಿಮಾಡಿ. ಅದಕ್ಕೆ ಜೇನುತುಪ್ಪ ಮತ್ತು ಒಂದು ಪಿಂಚ್ ದಾಲ್ಚಿನ್ನಿ ಸೇರಿಸಿ. ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯಿರಿ. ನಂತ್ರ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ.