alex Certify ತೂಕ ಕಡಿಮೆ ಮಾಡಲು ನೆರವಾಗುತ್ತೆ ಬೆಳಗಿನ ಈ ಹವ್ಯಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಕಡಿಮೆ ಮಾಡಲು ನೆರವಾಗುತ್ತೆ ಬೆಳಗಿನ ಈ ಹವ್ಯಾಸ

ಬೊಜ್ಜು ಇತ್ತೀಚಿನ ದಿನಗಳಲ್ಲಿ ಪ್ರಮುಖ ಸಮಸ್ಯೆ. ತೂಕ ಕಡಿಮೆ ಮಾಡಲು ಡಯಟ್ ಮಾತ್ರ ಸಾಕಾಗಲ್ಲ. ತೂಕ ಇಳಿಸಿಕೊಳ್ಳ ಬಯಸುವವರು ತಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

ಎಷ್ಟೇ ಪ್ರಯತ್ನ ಮಾಡಿದ್ರೂ ತೂಕ ಕಡಿಮೆಯಾಗ್ತಾ ಇಲ್ಲ ಎನ್ನುವವರು  ಆಹಾರ ಮತ್ತು ವ್ಯಾಯಾಮದ ಹೊರತಾಗಿ  ಜೀವನಶೈಲಿಯಲ್ಲಿ  ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

ಆರೋಗ್ಯಕ್ಕಾಗಿ ಆಹಾರದಲ್ಲಿ ಪ್ರೋಟೀನ್, ಫೈಬರ್ ಮತ್ತು ಎಲ್ಲಾ ರೀತಿಯ ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಬೇಕು.  ಯೋಗ ಮತ್ತು ಆರೋಗ್ಯದ  ತರಬೇತುದಾರರ ಪ್ರಕಾರ ಬೆಳಿಗ್ಗೆ ಎದ್ದು ಈ 5 ಕೆಲಸಗಳನ್ನು ಮಾಡುವುದರ ಮೂಲಕ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.

ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರನ್ನು ಕುಡಿಯಿರಿ. ಬೆಳಿಗ್ಗೆ ನೀರು ಕುಡಿಯೋದ್ರಿಂದ  ಜೀರ್ಣಕ್ರಿಯೆ ಸುಲಭವಾಗುತ್ತದೆ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.  ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ನೀರಿಗೆ ನಿಂಬೆ ರಸ ಅಥವಾ ಜೇನುತುಪ್ಪವನ್ನು ಹಾಕಿ ಸಹ ಕುಡಿಯಬಹುದು.

ಪ್ರತಿದಿನ ಬೆಳಿಗ್ಗೆ ಕನಿಷ್ಠ 20 ನಿಮಿಷಗಳ ಕಾಲ ನಡೆಯಬೇಕು. ಇದು ಬೇಗ ತೂಕ ಕಡಿಮೆ ಮಾಡಲು ಸಹಾಯಕವಾಗುತ್ತದೆ. ಅಧ್ಯಯನಗಳ ಪ್ರಕಾರ ವಿಟಮಿನ್ ಡಿ ಕೊರತೆ ಜನರ ತೂಕ  ಹೆಚ್ಚಾಗಲು ಕಾರಣ.

ನಿಮ್ಮ ದಿನವನ್ನು ಉತ್ತಮ ತಿಂಡಿಯೊಂದಿಗೆ ಪ್ರಾರಂಭಿಸಿ. ಬೆಳಗಿನ ಉಪಾಹಾರ ಇಡೀ ದಿನದ ಆಹಾರದ ಸಮತೋಲನ ಕಾಪಾಡುತ್ತದೆ.

ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಈ ಮೂರು ಉಚಿತವಾದ ಮತ್ತು ಅತ್ಯುತ್ತಮ ಆರೋಗ್ಯದ ರಹಸ್ಯಗಳು. ಪ್ರತಿದಿನ ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸು ಶಾಂತವಾಗಿರುತ್ತದೆ. ಸೂರ್ಯ ನಮಸ್ಕಾರ, ಕಪಾಲಭಾತಿ, ಯೋಗಾಸನ ಮಾಡುವುದರಿಂದ ತೂಕ ನಿಯಂತ್ರಣಕ್ಕೆ ಬರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...