ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ತಾಯಂದಿರು ಮಕ್ಕಳಿಗೆ ಒಂದು ವರ್ಷ ತುಂಬುವುದರೊಳಗೆ ಎದೆಹಾಲುಣಿಸುವುದನ್ನು ನಿಲ್ಲಿಸುತ್ತಾರೆ. ಆದರೆ, ಇಲ್ಲೊಬ್ಬಾಕೆ ತನ್ನ ಮಕ್ಕಳಿಗೆ 5 ಮತ್ತು 6 ವರ್ಷವಾದ್ರೂ ಕೂಡ ಎದೆಹಾಲುಣಿಸುತ್ತಿದ್ದಾಳೆ. ಅಲ್ಲದೆ ಅವರು ಬೇಡ ಎಂದು ಹೇಳುವವರೆಗೂ ಹಾಲುಣಿಸುವುದಾಗಿ ಹೇಳಿದ್ದಾಳೆ.
ವಿಮಾನ ಚಲಾಯಿಸಿದ 84 ವರ್ಷದ ವೃದ್ದೆ….!
ಇಂಗ್ಲೆಂಡಿನ ವೆಸ್ಟ್ ಯಾರ್ಕ್ಶೈರ್ನ ವೇಕ್ಫೀಲ್ಡ್ನ ಶೆರಿಲ್ ವೈನ್ ತನ್ನ ಶಾಲೆಗೆ ಹೋಗುವ ಮಕ್ಕಳಿಗೆ ಸ್ತನ್ಯಪಾನ ಮಾಡುವುದು ಸಾಮಾನ್ಯ ಎಂದು ಹೇಳಿದ್ದಾಳೆ. 39 ವರ್ಷವಾಗಿರುವ ಶೆರಿಲ್ ತನ್ನ ಮಕ್ಕಳು ಶಾಲೆಗೆ ತೆರಳುವ ಮುಂಚೆ, ಸಂಜೆ ಮತ್ತು ರಾತ್ರಿಯಿಡೀ ತನ್ನ ಮಕ್ಕಳಿಗೆ ಹಾಲುಣಿಸುತ್ತಿರುವುದಾಗಿ ಹೇಳಿದ್ದಾಳೆ.
ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್
ತಾಯಿ ತನ್ನ ಹಿರಿಯ ಮಗ ಮೂರು ವರ್ಷದವನಿದ್ದಾಗ ಸ್ತನ್ಯಪಾನವನ್ನು ನಿಲ್ಲಿಸಲು ಆರಂಭದಲ್ಲಿ ಯೋಜಿಸಿದ್ದಳು. ಆದರೆ, ಬಳಿಕ ತನ್ನ ನಿರ್ಧಾರವನ್ನು ಬದಲಾಯಿಸಿದ್ದಾಳೆ. ಇನ್ನು ಈಕೆ ಹಾಲುಣಿಸುವುದರ ಬಗ್ಗೆ ಕುಟುಂಬದ ಸದಸ್ಯರೇ ಅಪಸ್ವರ ಎತ್ತಿದ್ದರಂತೆ. ಆದರೆ, ಅದ್ಯಾವುದಕ್ಕೂ ಈಕೆ ಕ್ಯಾರೇ ಎಂದಿಲ್ಲ. ತನ್ನ ಮಕ್ಕಳಿಗೆ ಸ್ತನ್ಯಪಾನ ಕೊಡುವುದನ್ನು ಮುಂದುವರೆಸಿದ್ದಾಳೆ.