ಜೀವನದಲ್ಲಿ ಒಮ್ಮೆಯಾದರೂ ರಾಯಲ್ ಎನ್‌ಫೀಲ್ಡ್ ಬೈಕ್ ಓಡಿಸಬೇಕು, ಅದರ ಮೇಲೆ ಕುಳಿತು ಜುಮ್ ಎಂದು ಓಡಾಡಬೇಕು ಎಂಬುದು ಪ್ರತಿಯೊಬ್ಬ ಬೈಕ್ ಸವಾರರ ಕನಸಾಗಿರುತ್ತದೆ. ಹಾಗೆಯೇ, ಈಗಾಗಲೇ ಇದೇ ಕಂಪನಿಯ ಬೈಕ್ ಇರುವವರು ರಾಯಲ್ ಎನ್‌ಫೀಲ್ಡ್ ಕಂಪನಿಯ ಹೊಸ ಮಾದರಿಯ ಬೈಕ್‌ಗಳಿಗೆ ಹಾತೊರೆಯುತ್ತಿರುತ್ತಾರೆ. ಕಂಪನಿಯೂ ಆಗಾಗ ಹೊಸ ಬೈಕ್‌ಗಳನ್ನು ಮಾರುಕಟ್ಟೆಗೆ ಬಿಟ್ಟು ಗ್ರಾಹಕರನ್ನು ಸೆಳೆಯುತ್ತದೆ. ಹೀಗೆ ಬೈಕ್ ಖರೀಸಿದವರು ಅದನ್ನು ಮಾಡಿಫೈ ಮಾಡಿಸುವುದು ಸಾಮಾನ್ಯ
ಇಂತಹ ನಾವೀನ್ಯಕ್ಕೆ ಹೆಸರಾಗಿರುವ ರಾಯಲ್ ಎನ್‌ಫೀಲ್ಡ್ ‘ರಾಯಲ್ ಎನ್‌ಫೀಲ್ಡ್ ಮೆಟೆಯೋರ್ 350’ ಎಂಬ ಬೈಕ್ ಬಿಡುಗಡೆ ಮಾಡಿದೆ. ಡಿಜಿಟಲ್ ಕಲಾವಿದ ಅಖಿಲೇಶ್ ಮಂಚಾಂದನಿ ಅವರು ಇಂತಹ ಬೈಕ್‌ನ ಡಿಜಿಟಲ್ ವಿನ್ಯಾಸ ಮಾಡಿದ್ದು, ಸಾಮಾಜಿಕ ಜಾಲತಾಣ ಸೇರಿ ಆನ್‌ಲೈನ್‌ನ ಎಲ್ಲ ವೇದಿಕೆಗಳಲ್ಲಿ ಸಂಚಲನ ಮೂಡಿಸಿದೆ.
ಮುಂಭಾಗದಲ್ಲಿ ಅದ್ಭುತ ಸಸ್ಪೆನ್ಶನ್ ಸಿಸ್ಟಮ್ ಇದೆ, ಹ್ಯಾಂಡಲ್‌ಬಾರ್ ಎತ್ತರದಲ್ಲಿದ್ದರೂ ಸೀಟಿಗೆ ಹತ್ತಿರದಲ್ಲಿವೆ. ಕಾರ್ಬನ್ ಫೈಬರ್ ಫಿನಿಶ್, ವಿಶೇಷವಾದ ಒಂದೇ ಸೀಟು, ಎರಡೂ ದಪ್ಪದ ಟೈರ್‌ಗಳು, ಸಿಂಗಲ್ ಸಿಲಿಂಡರ್ 349 ಸಿಸಿ ಹೊಸ ಎಂಜಿನ್, ನಾಲ್ಕು ಸ್ಟ್ರೋಕ್, ಹೊಳೆಯುವ ಕಪ್ಪು ಬಣ್ಣ ಸೇರಿ ಹಲವು ಫೀಚರ್‌ಗಳು ಎಂತಹವರನ್ನೂ ಸೆಳೆಯುತ್ತಿವೆ.
ಅಂದಹಾಗೆ, ಭಾರತದಲ್ಲಿ ಇದರ ಬೆಲೆಯು 2.01 ಲಕ್ಷ ಆಗಿದೆ. ಎಂದಿನಂತೆ ಎನ್‌ಫೀಲ್ಡ್ ಬೈಕ್‌ಗಳ ಬೆಲೆ ತುಸು ದುಬಾರಿ ಎನಿಸಿದರೂ ಬೈಕ್‌ನ ಫೀಚರ್‌ಗಳು ಕಾಸಿನ ಆತಂಕವನ್ನು ಕಡಿಮೆ ಮಾಡುತ್ತವೆ.