ಮಾರುತಿ ಸುಜುಕಿ ಸ್ವಿಫ್ಟ್ ಭಾರತೀಯ ಪ್ರೀತಿಪಾತ್ರ ಕಾರು ಎಂಬುದು ಸಾಬೀತಾಗಿದೆ. ಕೈಗೆಟಕುವ ಬೆಲೆ, ಉತ್ತಮ ಮೈಲೇಜ್, ನಿರ್ವಹಣೆ, ಕಾರ್ಯಕ್ಷಮತೆ ದೃಷ್ಟಿಯಿಂದ ಇದು ಹೆಸರುವಾಸಿ.
ಹಾಗೆಯೇ ಮಾರುತಿ ಸುಜುಕಿ ಸ್ವಿಫ್ಟ್ ಎಸ್ ಸಿ.ಎನ್.ಜಿ. ರೂಪಾಂತರವು ಬಹಳ ಹಿಂದೆಯೇ ಬಿಡುಗಡೆಯಾಗಿದೆ. ಬಿಂಬಲ್ ಡಿಸೈನ್ ಹೈಪರ್ ಬಾಡಿಕಿಟ್ನೊಂದಿಗೆ ಮಾರುತಿ ಸುಜುಕಿ ಸ್ವಿಫ್ಟ್ ಡಿಜಿಟಲ್ ಇಮೇಜ್ ವಿನ್ಯಾಸಗೊಳಿಸಿದೆ, ಇದು ಹೆಚ್ಚು ಆಕ್ರಮಣಕಾರಿಯಾಗಿ ತೋರುತ್ತದೆ.
ವಿನ್ಯಾಸದ ವಿಶಿಷ್ಟತೆಗಳಿಗೆ ಸಂಬಂಧಿಸಿದಂತೆ, ಎದ್ದು ಕಾಣುವ ಮೊದಲ ವಿಷಯವೆಂದರೆ ದೊಡ್ಡದಾದ ಕಲರ್ ಬಾಡಿ. ಹ್ಯಾಚ್ಬ್ಯಾಕ್ನ ಮುಂಭಾಗದ ಬಂಪರ್ ಸಹ ನೆಲಕ್ಕೆ ಕಡಿಮೆ ಅಂತರದಲ್ಲಿದೆ. ಬಂಪರ್ ಮೇಲೆ ಫಾಗ್ ಲ್ಯಾಂಪ್ ಸ್ಥಳದಲ್ಲಿ ಏರ್ ಇಂಟೇಕ್ ಸ್ಥಾಪಿಸಲಾಗಿದೆ. ಇದರ ಜೊತೆಗೆ, ಸೈಡ್ ಇಂಡಿಕೇಟರ್ ಸುತ್ತಲೂ ಕಪ್ಪು ಲೇಯರ್ ಆಕರ್ಷಕವಾಗಿ ಕಾಣಿಸುತ್ತಿದೆ. ವಾಹನದ ರೇಸಿಂಗ್ ವ್ಯೂಗೆ ಪ್ರಮುಖವಾಗಿ ಹಿಂಭಾಗದ ಸ್ಪಾಯ್ಲರ್ ಅನ್ನು ಸೇರಿಸಲಾಗಿದೆ.
ಭಾರತದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಕೇವಲ 5.92 ಲಕ್ಷ ರೂಪಾಯಿಗೆ (ಎಕ್ಸ್ ಶೋರೂಂ) ಮತ್ತು 8.71 ಲಕ್ಷ ರೂಪಾಯಿಗೆ (ಎಕ್ ಶೋರೂಂ) ಖರೀದಿಸಬಹುದು. ಹ್ಯಾಚ್ಬ್ಯಾಕ್ 1.2-ಲೀಟರ್ ಓ -ಸರಣಿಯ 4- ಸಿಲಿಂಡರ್ ಎಂಜಿನ್ನಿಂದ 66 ಕೆಡಬ್ಲು ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಇದು ಮುಂಭಾಗದ ಚಕ್ರವನ್ನು ಮ್ಯಾನುವಲ್ ಅಥವಾ ಸ್ವಯಂಚಾಲಿತ ಟ್ರಾನ್ಸ್ಮಿಷನ್ ಮೂಲಕ ಶಕ್ತಿ ನೀಡುತ್ತದೆ.