ಅನೇಕರು ಹಸಿವಾದಾಗ ಸಿಕ್ಕಿದ್ದನ್ನು ತಿನ್ನುತ್ತಾರೆ. ಮತ್ತೆ ಕೆಲವರು ಆರೋಗ್ಯಕರ ಆಹಾರ ಸೇವನೆ ಮಾಡ್ತಾರೆ. ಆರೋಗ್ಯಕರ ಆಹಾರ ಸೇವನೆ ಮಾಡಿ, ಎಷ್ಟು ವ್ಯಾಯಾಮ, ಡಯಟ್ ಮಾಡಿದ್ರೂ ತೂಕ ಇಳಿಯುವುದಿಲ್ಲ. ಆರೋಗ್ಯ ಸುಧಾರಿಸುವುದಿಲ್ಲ. ಇದಕ್ಕೆ ಕಾರಣ ಯಾವ ಆಹಾರವನ್ನು ಯಾವಾಗ ಸೇವನೆ ಮಾಡ್ಬೇಕೆಂಬುದು ತಿಳಿಯದಿರುವುದು. ಕೆಲವೊಂದು ಆಹಾರದ ಕಾಂಬಿನೇಷನ್ ಸರಿಯಾಗಿರದ ಕಾರಣ ಕೆಲ ಸಮಸ್ಯೆ ಎದುರಾಗುತ್ತದೆ.
ಪದೇ ಪದೇ ಒಂದೇ ಆಹಾರ ಸೇವನೆ : ಒಂದೇ ಆಹಾರವನ್ನು ಪದೇ ಪದೇ ಸೇವನೆ ಮಾಡುವುದ್ರಿಂದ ಸಮಸ್ಯೆ ಎದುರಾಗುತ್ತದೆ. ಉದಾಹರಣೆಗೆ ಅನ್ನವನ್ನು ಮಾತ್ರ ಪ್ರತಿದಿನ ಸೇವನೆ ಮಾಡ್ತಾ ಬಂದರೆ ಬೇರೆ ಪೋಷಕಾಂಶಗಳು ದೇಹ ಸೇರುವುದಿಲ್ಲ. ಆಹಾರ ಎಷ್ಟು ಆರೋಗ್ಯಕರವಾಗಿದ್ದರೂ, ವೈವಿದ್ಯಮಯ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ.
ಬೆಂಡೆಕಾಯಿ-ಹಾಗಲಕಾಯಿ ಸೇವನೆ : ಬೆಂಡೆ ಕಾಯಿ ಜೊತೆ ಹಾಗಲಕಾಯಿಯನ್ನು ತಿನ್ನಲು ಕೆಲವರು ಇಷ್ಟಪಡುತ್ತಾರೆ. ಆದರೆ ಇವೆರಡನ್ನೂ ಎಂದಿಗೂ ಸೇವನೆ ಮಾಡಬಾರದು. ಆಯುರ್ವೇದದ ಪ್ರಕಾರ ಬೆಂಡೆ ಕಾಯಿ ಮತ್ತು ಹಾಗಲಕಾಯಿಯನ್ನು ಒಟ್ಟಿಗೆ ಸೇವಿಸಿದರೆ ಅದು ವಿಷದಂತೆ ವರ್ತಿಸಬಹುದು. ಹಾಗೆ ಮೂಲಂಗಿ ಸಲಾಡ್‌ಗೆ ಬೆಂಡೆಕಾಯಿ ಹಾಕಬಾರದು.
ಮೊಸರು ಮತ್ತು ಈರುಳ್ಳಿ : ಮೊಸರಿನೊಂದಿಗೆ ಈರುಳ್ಳಿಯನ್ನು ಎಂದೂ ಸೇವನೆ ಮಾಡಬಾರದು.ಇದ್ರಿಂದ ಅನೇಕ ಸಮಸ್ಯೆ ಎದುರಾಗುತ್ತದೆ. ಚರ್ಮ ರೋಗದ ಜೊತೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಎದುರಾಗುತ್ತದೆ.
ಉದ್ದಿನಬೇಳೆಯ ನಂತ್ರ ಮೊಸರ ಸೇವನೆ : ಉದ್ದಿನ ಬೇಳೆ ತಿಂದಿದ್ದರೆ, ತಕ್ಷಣ ಮೊಸರು ಸೇವನೆ ಮಾಡಬಾರದು. ಅಥವಾ ಹಾಲನ್ನು ಕುಡಿಯಬಾರದು. ಇದು ಅಜೀರ್ಣ ಸಮಸ್ಯೆಗೆ ಕಾರಣವಾಗುತ್ತದೆ.
ಹಾಲು ಮತ್ತು ಮಾಂಸಾಹಾರ: ಮೊಟ್ಟೆ, ಮಾಂಸ ತಿಂದ ನಂತರ, ಹಾಲು ಕುಡಿಯುತ್ತಿದ್ದರೆ, ಇದು ಹೊಟ್ಟೆ ನೋವು, ಅಜೀರ್ಣ ಇತ್ಯಾದಿ ಸಮಸ್ಯೆಗೆ ಕಾರಣವಾಗುತ್ತದೆ.
ಹಾಲು- ಹಣ್ಣು ಸೇವನೆ : ಹಾಲಿಗೆ ಹಣ್ಣುಗಳನ್ನು ಸೇರಿಸಿ ಸೇವನೆ ಮಾಡ್ತೆವೆ. ಸೀತಾಫಲ ಹಣ್ಣಿನ ಜೊತೆ ಅನೇಕರು ಹಾಲು ಸೇವನೆ ಮಾಡ್ತಾರೆ. ಆದರೆ ಹಣ್ಣುಗಳನ್ನು ಹಾಲಿನೊಂದಿಗೆ ತಿನ್ನಬಾರದು. ಹಾಲಿನೊಂದಿಗೆ ಹಣ್ಣುಗಳನ್ನು ತಿನ್ನುವುದರಿಂದ, ಹಾಲಿನಲ್ಲಿರುವ ಕ್ಯಾಲ್ಸಿಯಂ ಹಣ್ಣುಗಳ ಕಿಣ್ವಗಳನ್ನು ಹೀರಿಕೊಳ್ಳುತ್ತದೆ. ಈ ಕಾರಣದಿಂದಾಗಿ ದೇಹವು ಹಣ್ಣುಗಳ ಯಾವುದೇ ಪ್ರಯೋಜನವನ್ನು ಪಡೆಯುವುದಿಲ್ಲ.