![](https://kannadadunia.com/wp-content/uploads/2023/05/8b76ec66-97a4-4939-a163-46d104e4b56e.jpg)
ಕಲೆಗೆ ವಯಸ್ಸು, ಲಿಂಗದ ಹಂಗಿಲ್ಲ. ಕಲೆ ಯಾರ ಸ್ವತ್ತೂ ಅಲ್ಲ ಅನ್ನೋದನ್ನು ಈ ಮಹಿಳೆಯರು ಪ್ರೂವ್ ಮಾಡಿದ್ದಾರೆ. ಇದೀಗ, ವೈರಲ್ ಆಗಿರೋ ವಿಡಿಯೋ ನಿಮ್ಮ ತಲೆಯನ್ನು ಕೆರೆದುಕೊಳ್ಳುವಂತೆ ಮಾಡುವುದರಲ್ಲಿ ಸಂಶಯವೇ ಇಲ್ಲ.
ಪುನಮ್ ಆರ್ಟ್ ಅಕಾಡೆಮಿಯಿಂದ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಇಬ್ಬರು ಮಹಿಳೆಯರು ವೃತ್ತವನ್ನು ಚಿತ್ರಿಸುತ್ತಿದ್ದಾರೆ. ಮಹಿಳೆಯರು ಕಂಬದ ಸುತ್ತಲೂ ಸರಿಯಾದ ಅಳತೆಗಳನ್ನು ಮಾಡುವ ಮೂಲಕ ಚಿತ್ರ ಬಿಡಿಸಲು ಪ್ರಾರಂಭಿಸುತ್ತಾರೆ.
ನಂತರ ಅವರು ಸೀಮೆಸುಣ್ಣ ಮತ್ತು ಕಪ್ಪು ಪುಡಿಯೊಂದಿಗೆ ವೃತ್ತವನ್ನು ತುಂಬುತ್ತಾರೆ. ಸ್ವಲ್ಪ ಹೊತ್ತಿನಲ್ಲಿ ಕಂಬದ ಸುತ್ತಲೂ ನಿರ್ಮಿಸಲಾದ ಸಿಮೆಂಟ್ ಸ್ಥಳದಂತೆ ಕಾಣುತ್ತದೆ. ಕಂಬಕ್ಕೆ ಕಟ್ಟೆಯನ್ನು ನಿರ್ಮಿಸಲಾಗಿ, ಮಹಿಳೆಯರಿಬ್ಬರು ಅದರಲ್ಲಿ ನಡೆಯುತ್ತಿರುವಂತೆ ಕಾಣುತ್ತದೆ.
ವಿಡಿಯೋ ಹಲವಾರು ವೀಕ್ಷಣೆಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಕೆಲವರು ಮಹಿಳೆಯರ ಪ್ರತಿಭೆಯನ್ನು ಶ್ಲಾಘಿಸಿದರೆ, ಕೆಲವರು ಇಂತಹ ಆಪ್ಟಿಕಲ್ ಇಲ್ಯೂಷನ್ ಕಲೆಯನ್ನು ಇನ್ನಷ್ಟು ಮಾಡುವಂತೆ ಪ್ರೋತ್ಸಾಹಿಸಿದ್ದಾರೆ. ಕಲೆ ಎಷ್ಟು ನೈಜವಾಗಿ ಕಾಣುತ್ತದೆ ಎಂದು ಹಲವರು ಹೇಳಿದ್ರು.