ಮಕ್ಕಳು ಶಾಲೆಗೆ ಹೋಗುವಾಗ ಮತ್ತು ಕಚೇರಿ ಕೆಲಸಕ್ಕೆ ಹೋಗುವವರು ಕುಡಿಯುವ ನೀರನ್ನು ಬಾಟಲಿನಲ್ಲಿ ತುಂಬಿಸಿಕೊಂಡು ಹೋಗುತ್ತಾರೆ. ಆದರೆ ಈ ನೀರಿನ ಬಾಟಲಿಯನ್ನು ಪ್ರತಿದಿನ ಸ್ವಚ್ಛಗೊಳಿಸಿ. ಇಲ್ಲವಾದರೆ ಇದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಇವು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹಾಗಾದ್ರೆ ನೀರಿನ ಬಾಟಲಿಗಳನ್ನು ಸ್ವಚ್ಛಗೊಳಿಸಲು ಈ ಸಲಹೆ ಪಾಲಿಸಿ.
ಬಾಟಲಿಯಲ್ಲಿ ಶಿಲೀಂಧ್ರಗಳು ಬೆಳೆಯುತ್ತದೆ. ಇವು ನಮಗೆ ಹೊಟ್ಟೆಯ ಸಮಸ್ಯೆಯನ್ನುಂಟು ಮಾಡುತ್ತದೆ. ಹಾಗಾಗಿ ಬಾಟಲಿಯಲ್ಲಿ ನೀರಿನ ರುಚಿ ಬದಲಾದಾಗ ಮತ್ತು ಅದರಲ್ಲಿ ವಾಸನೆ ಬರುತ್ತಿದ್ದರೆ ತಕ್ಷಣ ಬಾಟಲಿಯನ್ನು ಸ್ವಚ್ಛಗೊಳಿಸಿ. ಬಾಟಲಿಯನ್ನು ಅಡುಗೆ ಸೋಡಾ ಬಳಸಿ ಸ್ವಚ್ಛಗೊಳಿಸಬಹುದು. ಬಾಟಲಿಯಲ್ಲಿ ಅಡುಗೆ ಸೋಡಾವನ್ನು ಹಾಕಿ ಜೊತೆಗೆ ನೀರನ್ನು ಸೇರಿಸಿ ರಾತ್ರಿಯಿಡಿ ಇಟ್ಟು ಬೆಳಿಗ್ಗೆ ವಾಶ್ ಮಾಡಿ. ಇದರಿಂದ ಶಿಲೀಂಧ್ರಗಳು ನಿವಾರಣೆಯಾಗುತ್ತದೆ.
ಹಾಗೇ ಬಾಟಲಿಯನ್ನು ಬ್ರಷ್ ನಿಂದ ಉಜ್ಜಿ ತೊಳೆಯಬಹುದು. ಇಲ್ಲವಾದರೆ ಕ್ಲಿನಿಂಗ್ ಟ್ಯಾಬ್ಲೆಟ್ ಅನ್ನು ಬಳಸಬಹುದು. ಬಾಟಲಿಯಲ್ಲಿ ನೀರಿನ ಜೊತೆಗೆ ಟ್ಯಾಬ್ಲೆಟ್ ಸೇರಿಸಿ ರಾತ್ರಿಯಿಡಿ ಹಾಗೇ ಇಡಿ. ಬೆಳಿಗ್ಗೆ ತೊಳೆದರೆ ಬಾಟಲಿ ಸ್ವಚ್ಛವಾಗುತ್ತದೆ ಮತ್ತು ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ.