ಪ್ರತಿಯೊಬ್ಬರ ಮನೆಯಂಗಳದಲ್ಲಿ ದೇವರಿಗೆಂದೋ, ಅಲಂಕಾರಕ್ಕೆಂದೋ ದಾಸವಾಳ ಹೂವನ್ನು ಬೆಳೆದಿರುತ್ತಾರೆ. ಆದರೆ ಬಹುತೇಕರಿಗೆ ಇದರ ಔಷಧೀಯ ಉಪಯೋಗಗಳ ಬಗ್ಗೆ ತಿಳಿದಿಲ್ಲ. ದಾಸವಾಳದ ಹೂವಿನಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿದ್ದು ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ಶೀತ, ಕೆಮ್ಮು, ತಲೆನೋವು ಕಾಣಿಸಿದಾಗ ದಾಸವಾಳ ಹೂವನ್ನು ಕಿವುಚಿ, ಚಿಟಿಕೆ ಕಾಳುಮೆಣಸಿನ ಪುಡಿ ಬೆರೆಸಿ ಕುಡಿಯಬೇಕು.
ಇದು ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರಹಾಕಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದರ ಎಲೆಯನ್ನು ಬಿಸಿ ಮಾಡಿದ ತೆಂಗಿನೆಣ್ಣೆಗೆ ಹಾಕಿ ಎರಡು ಗಂಟೆ ಬಿಡಿ. ಬಳಿಕ ಸೋಸಿ ತಲೆಗೆ ಹಚ್ಚುವುದರಿಂದ ತಲೆಕೂದಲು ಉದ್ದವಾಗಿ ಬೆಳೆಯುತ್ತದೆ.
ಜೀರ್ಣ ಕ್ರಿಯೆಯನ್ನು ಹೆಚ್ಚಿಸುವ ಈ ಸೊಪ್ಪನ್ನು, ಹೂವನ್ನು ತಂಬುಳಿ ರೂಪದಲ್ಲಿ ಸೇವಿಸಬಹುದು.