ಆಧುನಿಕ ಜಗತ್ತಿನಲ್ಲಿ ಬದುಕುಳಿಯುವುದು ಸಾಕಷ್ಟು ಕಷ್ಟವೇ. ಪಾವತಿಸಲು ಬಿಲ್‌ಗಳು ಮತ್ತು ದೈನಂದಿನ ಜೀವನದ ಬಗ್ಗೆ ಲೆಕ್ಕಾಚಾರ ಮಾಡುತ್ತಾ ಹೋದರೆ ಮುಗಿಯುವುದೇ ಇಲ್ಲ. ಆದ್ದರಿಂದ, ಡೇನಿಯಲ್ ಶೆಲ್ಲಬಾರ್ಗರ್ ಅಕಾ ಸ್ಯುಲೋ ಎನ್ನುವವರು ಮುಂದಿನ ಒಂದೂವರೆ ದಶಕದಲ್ಲಿ ಗುಹೆಯಲ್ಲಿ ವಾಸಿಸಲು ನಿರ್ಧರಿಸಿದ್ದರು.
ಓನ್ಲಿ ಹ್ಯೂಮನ್‌ನಲ್ಲಿ ಕಾಣಿಸಿಕೊಂಡ ಸ್ಯುಲೋ ಅವರು ಆಧುನಿಕ ಗುಹಾನಿವಾಸಿಗಳ ಕನಸನ್ನು ಬದುಕಲು ಏಕೆ ಆರಿಸಿಕೊಂಡರು ಮತ್ತು ಅದು ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ. ನಾನು ನಗದು ರಹಿತವಾಗಿ ಹೋಗಿದ್ದೆ. ಇದರಿಂದ ಸಾಕಷ್ಟು ತೃಪ್ತಿ ಹೊಂದಿದ್ದೇನೆ ಎಂದಿದ್ದಾರೆ.
ಬಾಡಿಗೆಯನ್ನು ಪಾವತಿಸುವುದು ಕಷ್ಟ ಎಂದು ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ. ಆಧುನಿಕ ಜೀವನದಿಂದಾಗಿ ತೀವ್ರ ಖಿನ್ನತೆಗೆ ಒಳಗಾಗಿದ್ದುದಾಗಿ ಹೇಳಿಕೊಂಡಿದ್ದಾರೆ. ಒಂದು ಹಂತದಲ್ಲಿ ಪ್ರಾಣವನ್ನು ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದೆ. ಆದರೆ ಅಲೆಮಾರಿ ಜೀವನಶೈಲಿಯನ್ನು ಅಳವಡಿಸಿಕೊಂಡ ನಂತರ, ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂದಿದ್ದಾರೆ. 14 ವರ್ಷ ಗುಹೆಯಲ್ಲಿ ವಾಸಿಸಿರುವ ಅವರು ಅಲ್ಲಿನ ತಮ್ಮ ಅದ್ಭುತ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸ್ವಾತಂತ್ರ್ಯವನ್ನು ಆಸ್ವಾದಿಸಿದುದಾಗಿ ಹೇಳಿದ್ದಾರೆ.