alex Certify 70 ವರ್ಷಗಳಿಂದ ಯಂತ್ರದಲ್ಲಿ ಬಂಧಿಯಾಗಿದ್ದಾರೆ ಈ ವ್ಯಕ್ತಿ; ಜಗತ್ತಿಗೇ ಮಾದರಿ ಈ ಹೋರಾಟದ ಬದುಕು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

70 ವರ್ಷಗಳಿಂದ ಯಂತ್ರದಲ್ಲಿ ಬಂಧಿಯಾಗಿದ್ದಾರೆ ಈ ವ್ಯಕ್ತಿ; ಜಗತ್ತಿಗೇ ಮಾದರಿ ಈ ಹೋರಾಟದ ಬದುಕು….!

ಕೋಣೆಯಲ್ಲಿ ನಮ್ಮನ್ನು ಯಾರಾದರೂ ಲಾಕ್ ಮಾಡಿಟ್ಟರೆ ಎಷ್ಟೊತ್ತು ಸಮಾಧಾನದಿಂದ ಇರಲು ಸಾಧ್ಯ? ಅರ್ಧಗಂಟೆಯಾಗುವಷ್ಟರಲ್ಲಿ ಹೊರಗೆ ಹೋಗಬೇಕೆಂಬ ತವಕ, ಕೋಪ, ಅಸಮಾಧಾನ, ಬೇಸರ ಎಲ್ಲವೂ ಶುರುವಾಗುತ್ತದೆ. ಆದರೆ 70 ವರ್ಷಗಳಿಂದ ವ್ಯಕ್ತಿಯೊಬ್ಬ ಯಂತ್ರದಲ್ಲಿ ಬಂಧಿಯಾಗಿಯೇ ಬದುಕುತ್ತಿದ್ದಾರೆ.

ಈ ವ್ಯಕ್ತಿಯ ಹೆಸರು ಪಾಲ್ ಅಲೆಕ್ಸಾಂಡರ್. ಬದುಕುವ ಉತ್ಸಾಹ, ಸಮಾಜ ಮತ್ತು ಜಗತ್ತಿಗೆ ಏನನ್ನಾದರೂ ಮಾಡಬೇಕೆಂಬ ಬಯಕೆ ಮತ್ತು ಇತರರನ್ನು ಪ್ರೇರೇಪಿಸುವ  ಉದಾತ್ತ ಉದ್ದೇಶ ಇವರದ್ದು. ಸಣ್ಣ ಸಮಸ್ಯೆಗಳು ಮತ್ತು ತೊಂದರೆಗಳಿಗೆ ಹೆದರುತ್ತ, ಅದೃಷ್ಟ ಅಥವಾ ಇತರರನ್ನು ಶಪಿಸಲು ಪ್ರಾರಂಭಿಸುವ ಜನರಿಗೆ ಪಾಲ್ ಅಲೆಕ್ಸಾಂಡರ್ ಸ್ಫೂರ್ತಿಯಾಗಿದ್ದಾರೆ. ಅವರ ಹೋರಾಟದ ಕಥೆ ಮಾನವಕುಲಕ್ಕೆ ಉತ್ತಮ ಉದಾಹರಣೆ. 6 ವರ್ಷದವರಿದ್ದಾಗ ಪಾಲ್‌ ಅಲೆಕ್ಸಾಂಡರ್‌ ಪೋಲಿಯೊದಿಂದ ಬಳಲುತ್ತಿದ್ದರು. ದೇಹ ಪಾರ್ಶ್ವವಾಯುವಿಗೆ ಒಳಗಾಗಿತ್ತು.

ಈಗ ಅವರಿಗೆ ಸುಮಾರು 77 ವರ್ಷ. ಕಬ್ಬಿಣದ ಶ್ವಾಸಕೋಶದ ಸಹಾಯದಿಂದ ಇನ್ನೂ ಬದುಕಿದ್ದಾರೆ. ಪಾಲ್ 1946 ರಲ್ಲಿ ಜನಿಸಿದರು. ಪೋಲಿಯೊ 1952 ರಲ್ಲಿ ಅಮೆರಿಕಾದಲ್ಲಿ ಕೋಲಾಹಲವನ್ನು ಸೃಷ್ಟಿಸಿತು. ಪಾಲ್ ಕೂಡ ಇದಕ್ಕೆ ತುತ್ತಾದರು. ಅವರಿಗೆ ಕತ್ತಿನ ಕೆಳಗಿನ ಭಾಗ ಕೆಲಸ ಮಾಡುತ್ತಿರಲಿಲ್ಲ. ಉಸಿರಾಟದ ತೊಂದರೆ ಇತ್ತು. ಜೀವ ಉಳಿಸಲು ಕಬ್ಬಿಣದ ಶ್ವಾಸಕೋಶದ ಯಂತ್ರದಲ್ಲಿ ಇರಿಸಲಾಗಿತ್ತು. ಇದು ಆ ಕಾಲದಲ್ಲಿ ವೆಂಟಿಲೇಟರ್‌ನಂತಹ ವಿಶೇಷ ಯಂತ್ರವಾಗಿತ್ತು. ಇದನ್ನು 1928 ರಲ್ಲಿ ಕಂಡುಹಿಡಿಯಲಾಯಿತು.

ಈ ಯಂತ್ರದ ಸಹಾಯದಿಂದ ಬದುಕುತ್ತಿರುವ ವಿಶ್ವದ ಏಕೈಕ ವ್ಯಕ್ತಿ ಪಾಲ್. ಕಾಲ ಬದಲಾಗಿದೆ. ತಂತ್ರಜ್ಞಾನ ಬದಲಾಗಿದೆ. ಆದರೆ ಪಾಲ್ ಬದಲಾಗಲಿಲ್ಲ, ಅದೇ ಯಂತ್ರದಲ್ಲಿ ಉಳಿದಿದ್ದಾರೆ. ತನ್ನ ಜೀವವನ್ನು ಉಳಿಸಿದ ಯಂತ್ರವನ್ನು ಬಿಡಲು ಅವರು ಬಯಸಲಿಲ್ಲ. ಇಲ್ಲಿಯವರೆಗೂ ಅವರ ಅನಾರೋಗ್ಯ ಸುಧಾರಿಸಿಲ್ಲ. ಕತ್ತಿನ ಕೆಳಗಿನ ಭಾಗವನ್ನು ಸರಿಪಡಿಸಲು ಸಾಧ್ಯವಾಗಲಿಲ್ಲ. ಬದುಕಿ ಉಳಿಯಲು ಅದೇ ಯಂತ್ರವನ್ನು ಪಾಲ್‌ ಆಧರಿಸಿದ್ದಾರೆ. ಇದೇ ಸ್ಥಿತಿಯಲ್ಲಿ ಅವರು ತಮ್ಮ ಓದನ್ನು ಪೂರ್ಣಗೊಳಿಸಿದರು ಮತ್ತು ಪುಸ್ತಕವನ್ನು ಸಹ ಬರೆದರು.

ಈಗ ಅವರು ಪ್ರೇರಕ ಭಾಷಣಕಾರರೂ ಹೌದು. ಪಾಲ್ ಹೈಸ್ಕೂಲ್ ಶಿಕ್ಷಣವನ್ನು ತಡವಾಗಿ ಮುಗಿಸಿದರೂ  ಕಾನೂನಿನಲ್ಲಿ ಪದವಿ ಪಡೆದಿದ್ದಾರೆ. ಸ್ನೇಹಿತ ಮತ್ತು ನರ್ಸ್ ಸಹಾಯದಿಂದ ಪ್ಲಾಸ್ಟಿಕ್ ಕಡ್ಡಿ ಹಾಗೂ ಪೆನ್ನು ಬಳಸಿ ತಮ್ಮ ಆತ್ಮಕಥೆಯನ್ನು ಬರೆದಿದ್ದಾರೆ. ಇದಕ್ಕಾಗಿ ಪಾಲ್‌ ಎಂಟು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡರು. ಸದ್ಯ ಅವರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಈಗ ಪಾಲ್‌ಗೆ ವಯಸ್ಸಾಗಿದೆ, 24 ಗಂಟೆಗಳ ಆರೈಕೆಯ ಅಗತ್ಯವಿದೆ. ಅವರ ಬಳಿ ಹಣವೂ ಇಲ್ಲ. ಕಬ್ಬಿಣದ ಶ್ವಾಸಕೋಶದ ಯಂತ್ರವನ್ನು ನಿರ್ವಹಿಸಲು, ಚಿಕಿತ್ಸೆಯ ವೆಚ್ಚವನ್ನು ಭರಿಸಲು ಆರ್ಥಿಕ ಬಿಕ್ಕಟ್ಟು ಎದುರಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...