ಮೂಢನಂಬಿಕೆಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಕೆಲವರು ಬದಲಾಗೋದೇ ಇಲ್ಲ. ಆದರೆ ಅನೇಕ ಬಾರಿ ಈ ಮೂಢನಂಬಿಕೆಗಳು ಜೀವಕ್ಕೆ ಸಂಚಕಾರ ತಂದಿದ್ದೂ ಇದೆ. ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಬುಲಂದರ್ಶಹರ್ನಲ್ಲಿ ವ್ಯಕ್ತಿಯೊಬ್ಬ ಮೂಢನಂಬಿಕೆಯನ್ನು ನಂಬಿ ಪತ್ನಿಯ ಜೀವವನ್ನೇ ತೆಗೆದಿದ್ದಾನೆ.
ಈ ಎಲ್ಲ ತೊಂದರೆಗಳಿಗೆ ಕಾರಣವಾಗುತ್ತೆ ʼಲಿವರ್ʼ ನಲ್ಲಿನ ಕೊಬ್ಬಿನಂಶ
35 ವರ್ಷದ ದೇವೇಂದ್ರಿ ಎಂಬಾಕೆ ಕಟ್ಟಿಗೆಯನ್ನು ತರಲು ಹೊಲಕ್ಕೆ ಹೋಗಿದ್ದಳು. ಈ ವೇಳೆ ಆಕೆಗೆ ಹಾವೊಂದು ಕಚ್ಚಿತ್ತು. ಕೂಡಲೇ ಮನೆ ಕಡೆಗೆ ಓಡಿ ಬಂದ ಮಹಿಳೆ ತನ್ನ ಪತಿಯ ಬಳಿ ಹಾವು ಕಚ್ಚಿದ್ದನ್ನು ವಿವರಿಸಿದ್ದಳು. ಪತಿ ಕೂಡಲೇ ದೇವೇಂದ್ರಿಯನ್ನು ಆಸ್ಪತ್ರೆಗೆ ಸಾಗಿಸುವುದು ಬಿಟ್ಟು ಮೂಢನಂಬಿಕೆಗಳಿಗೆ ಕಟ್ಟು ಬಿದ್ದು ತಾನೇ ಚಿಕಿತ್ಸೆ ನೀಡಲು ಹೋಗಿದ್ದಾನೆ. ಪರಿಣಾಮ ದೇವೇಂದ್ರಿ ಸಾವನ್ನಪ್ಪಿದ್ದಾಳೆ.
ಕೋವಿಡ್ 19 ಗ್ರಾಫ್ ಕುರಿತಂತೆ ಆತಂಕಕಾರಿ ಮಾಹಿತಿ ಹೊರ ಹಾಕಿದ ಕೇಂದ್ರ ಸಚಿವಾಲಯ
ಈತ ಸಗಣಿಯಿಂದ ಪತ್ನಿಯ ದೇಹವನ್ನು ಮುಚ್ಚಿದರೆ ಹಾವಿನ ವಿಷವು ತನ್ನಿಂದ ತಾನಾಗಿಯೇ ದೇಹದಿಂದ ಹೊರಟು ಹೋಗುತ್ತದೆ ಎಂದು ನಂಬಿದ್ದನು. ಇದೇ ಕಾರಣದಿಂದಾಗಿ ಆತ ಪತ್ನಿಯನ್ನು ಆಸ್ಪತ್ರೆಗೆ ಸಾಗಿಸುವುದು ಬಿಟ್ಟು ಸಂಪೂರ್ಣ ದೇಹಕ್ಕೆ ಸಗಣಿ ಮೆತ್ತಿದ್ದ. ಹಾಗೂ ಪತ್ನಿ ಹುಷಾರಾಗುತ್ತಾಳೆ ಎಂದೇ ನಂಬಿದ್ದ. ಆದರೆ ಸಗಣಿಯ ರಾಶಿಯಿಂದ ಮಹಿಳೆಯನ್ನು ಹೊರತೆಗೆಯುಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು.
ಈ ವೇಳೆ ಹಾವಾಡಿಸುವ ವ್ಯಕ್ತಿಯು ಮಂತ್ರವನ್ನು ಪಠಿಸುತ್ತಲೇ ಇದ್ದನು. ಈ ಘಟನೆ ನಡೆಯುವ ವೇಳೆ ಗ್ರಾಮಸ್ಥರೂ ಸಹ ಅಲ್ಲಿ ಹಾಜರಿದ್ದರು. ಆದರೆ ಯಾರೊಬ್ಬರೂ ಈ ಮೂಢನಂಬಿಕೆಯನ್ನು ವಿರೋಧಿಸಿರಲಿಲ್ಲ.