ನಿಮ್ಮ ಮಕ್ಕಳಿಗೆ ಏನಾದರೂ ದುಬಾರಿ ಬೆಲೆಯ ವಸ್ತುವನ್ನ ಕೊಡಿಸಬೇಕು ಅಂತಾ ಪ್ಲಾನ್ ಮಾಡಿರ್ತೀರಾ…..! ಆದರೆ ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಿದ ವಸ್ತು ಮಕ್ಕಳಿಗೆ ಬಳಸೋಕೆ ಯೋಗ್ಯವಾಗಿಲ್ಲ ಎಂದು ತಿಳಿದರೆ ಮನಸ್ಸಿಗೆ ಎಷ್ಟೊಂದು ಬೇಜಾರಾಗುತ್ತೆ ಅಲ್ವಾ..? ಇದೇ ರೀತಿಯ ಸಂಕಷ್ಟದಲ್ಲಿ ಅಮೆರಿಕದ ವಾಷಿಂಗ್ಟನ್ ನಿವಾಸಿಯೊಬ್ಬರು ಸಿಲುಕಿದ್ದಾರೆ.
ತಂದೆಯೊಬ್ಬರು ತನ್ನ ಇಬ್ಬರು ಮಕ್ಕಳಿಗೆಂದು ಪ್ರತಿ ಬಾಕ್ಸಿಗೆ 4392 ರೂಪಾಯಿ ಖರ್ಚು ಮಾಡಿ ಎರಡು ಟಿಫಿನ್ ಬಾಕ್ಸ್ಗಳನ್ನ ತಂದಿದ್ದರು. ಆದರೆ ಈ ಬಾಕ್ಸ್ ಮಕ್ಕಳಿಗೆ ತುಂಬಾ ಭಾರ ಎನಿಸುತ್ತಿದೆ ಎಂಬ ವಿಚಾರ ಬಳಿಕ ಬೆಳಕಿಗೆ ಬಂದಿದೆ.
ಕಳೆದೊಂದು ವರ್ಷಗಳಿಂದ ಶಾಲೆಗಳಿಗೆ ಬೀಗ ಜಡಿದಿದ್ದ ಅಮೆರಿಕ ಇದೀಗ ಒಂದೊಂದೇ ನಿರ್ಬಂಧಗಳನ್ನ ಸಡಿಲಗೊಳಿಸುತ್ತಾ ಬರ್ತಿದೆ. ಹೀಗಾಗಿ ಪೋಷಕರು ಸಹ ಮಕ್ಕಳನ್ನ ಶಾಲೆಗೆ ಕಳಿಸಲು ಎಲ್ಲಾ ವ್ಯವಸ್ಥೆಯನ್ನ ಮಾಡ್ತಿದ್ದಾರೆ. ಅದೇ ರೀತಿ ಈ ತಂದೆ ಕೂಡ ಮಕ್ಕಳಿಗೆ ಹೆಚ್ಚಿನ ವ್ಯವಸ್ಥೆ ಮಾಡಲು ಹೋಗಿ ಪೇಚಿಗೆ ಸಿಲುಕಿದ್ದಾನೆ.
ಸ್ಲೇಟ್ ಮ್ಯಾಗಜಿನ್ ಡೈರೆಕ್ಟರ್ ಆಗಿರುವ ಗ್ರೇಗ್ ಲ್ಯಾವೆಲ್ಲೆ ತನ್ನ 8.5 ವರ್ಷ ಹಾಗೂ 6 ವರ್ಷದ ಮಕ್ಕಳಿಗಾಗಿ ಪ್ಲಾನೆಟ್ ಬಾಕ್ಸ್ ಎಂಬ ಕಂಪನಿಯ ದುಬಾರಿ ಟಿಫನ್ ಬಾಕ್ಸ್ಗಳನ್ನ ಖರೀದಿಸಿದ್ದರು. ಇದೀಗ ತಾವು ಅನುಭವಿಸುತ್ತಿರುವ ಪಶ್ಚಾತಾಪವನ್ನ ಶೇರ್ ಮಾಡಿದ್ದಾರೆ.
ಪರಿಸರ ಸ್ನೇಹಿ ಉತ್ಪನ್ನಗಳಿಗೆ ಒತ್ತು ಕೊಡಬೇಕು ಎಂದು ಪ್ಲಾಸ್ಟಿಕ್ ಲಂಚ್ ಬಾಕ್ಸ್ಗಳ ಬದಲಾಗಿ ಸ್ಟೀಲ್ ಬಾಕ್ಸ್ಗಳನ್ನ ಖರೀದಿ ಮಾಡಿದೆವು. ಆದರೆ ಇದು ಪರಿಸರ ಸ್ನೇಹಿ ಉತ್ಪನ್ನಗಳ ಹೆಸರಲ್ಲಿ ನಡೆಯುತ್ತಿರುದ ದೋಖಾ ಆಗಿದೆ. ಇದು ಅತ್ಯಂತ ಭಾರದ ಟಿಫಿನ್ ಬಾಕ್ಸ್ ಆಗಿದ್ದು ನಾನು ಖರೀದಿ ಮಾಡಿದ ವಸ್ತುಗಳ ಬಗ್ಗೆ ನಾನು ಪಶ್ಚಾತಾಪ ಹೊಂದಿದ್ದೇನೆ ಎಂದು ಹೇಳಿದ್ದಾರೆ.