ರಾತ್ರಿಯಲ್ಲಿ ನಿದ್ರೆಯ ಕೊರತೆ ಅಥವಾ ಅತಿಯಾದ ಆಯಾಸದಿಂದಾಗಿ ನಮಗೆ ಹಗಲಿನಲ್ಲೂ ನಿದ್ದೆ ಬಂದಂತಾಗುತ್ತದೆ. ಕೆಲವರು ಪ್ರತಿದಿನ ಮಧ್ಯಾಹ್ನ ಊಟವಾದ ಬಳಿಕ ಸ್ವಲ್ಪ ಸಮಯ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಸಂಶೋಧನೆಯ ಪ್ರಕಾರ ಹಗಲಿನಲ್ಲಿ ಮಾಡುವ ಈ ಸಣ್ಣ ನಿದ್ದೆ ಅತ್ಯಂತ ಪ್ರಯೋಜನಕಾರಿ.
ನಿದ್ರೆಯಿಂದ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ. ವ್ಯಕ್ತಿಯು ತನ್ನ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡಲು ಸಾಧ್ಯವಾಗುತ್ತದೆ. ಆದರೆ ನಿದ್ರೆಗೆ ಸಂಬಂಧಿಸಿದ ಈ ಪ್ರಯೋಜನಗಳು ವ್ಯಕ್ತಿಯು ಎಷ್ಟು ಸಮಯದವರೆಗೆ ನಿದ್ದೆ ಮಾಡುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಹಗಲಿನಲ್ಲಿ ಮಲಗಬೇಕೇ ಅಥವಾ ಬೇಡವೇ?
ಸಂಶೋಧನೆಯ ಪ್ರಕಾರ ಹಗಲಿನಲ್ಲಿ ಮಲಗುವುದರಿಂದ ಒತ್ತಡ ಉಂಟಾಗುವುದಿಲ್ಲ. ದಿನವಿಡೀ ತಾಜಾತನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಮಾನಸಿಕ ಆರೋಗ್ಯವನ್ನು ಸಹ ಈ ಸಣ್ಣ ನಿದ್ದೆ ಬೆಂಬಲಿಸುತ್ತದೆ. ಹಗಲಿನಲ್ಲಿ ಅಲ್ಪ ಸಮಯ ಮಲಗುವುದು ಪ್ರಯೋಜನಕಾರಿ ಎಂದು ಪರಿಗಣಿಸಬಹುದು.
ನಿಮ್ಮನ್ನು ಬುದ್ಧಿವಂತರನ್ನಾಗಿ ಮಾಡುತ್ತದೆ ಹಗಲಿನ ನಿದ್ದೆ!
ಹಗಲಿನಲ್ಲಿ 30 ರಿಂದ 90 ನಿಮಿಷಗಳ ನಿದ್ದೆ ಮಾಡುವ ಜನರು ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಕಡಿಮೆ ಅಥವಾ ಹೆಚ್ಚು ನಿದ್ರೆ ಮಾಡುವವರಿಗಿಂತ ಅವರ ಸ್ಮರಣೆಯು ತೀಕ್ಷ್ಣವಾಗಿರುತ್ತದೆ. ಪದಗಳನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲ ಅವರು ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ.
ಇಷ್ಟೇ ಅಲ್ಲ ಹಗಲಿನಲ್ಲಿ ಸಣ್ಣ ನಿದ್ದೆ ಮಾಡುವುದರಿಂದ ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ. ದೇಹಕ್ಕೆ ಅತಿಯಾದ ಆಯಾಸವಾಗುವುದಿಲ್ಲ. ಮನಸ್ಸು ಜಾಗೃತವಾಗಿರುತ್ತದೆ. ಮೂಡ್ ಫ್ರೆಶ್ ಆಗುತ್ತದೆ
ಆದರೆ ಹಗಲಿನಲ್ಲಿ ದೀರ್ಘಕಾಲ ನಿದ್ರಿಸಿದರೆ ಈ ಎಲ್ಲಾ ಪ್ರಯೋಜನಗಳು ಅನಾನುಕೂಲಗಳಾಗಿ ಬದಲಾಗಬಹುದು ಎಂಬುದನ್ನು ನೆನಪಿನಲ್ಲಿಡಿ. ಹಗಲಿನಲ್ಲಿ ಹೆಚ್ಚು ಹೊತ್ತು ನಿದ್ದೆ ಮಾಡುವುದರಿಂದ ಅಧಿಕ ರಕ್ತದೊತ್ತಡ, ಖಿನ್ನತೆ, ಆಸ್ಟಿಯೊಪೊರೋಸಿಸ್, ದುರ್ಬಲ ರೋಗನಿರೋಧಕ ಶಕ್ತಿ, ಬೊಜ್ಜು, ಮಲಬದ್ಧತೆ ಮುಂತಾದ ಸಮಸ್ಯೆಗಳಾಗುತ್ತವೆ.