
ಜೀವನದುದ್ದಕ್ಕೂ ಅನೇಕ ಪ್ರಥಮಗಳನ್ನು ಅನುಭವಿಸುವಾಗ ಸಹಜವಾಗಿ ಖುಷಿತರುತ್ತದೆ. ಅದರಲ್ಲೂ ಮಕ್ಕಳಲ್ಲಿ ಅಪರಿಮಿತ ಖುಷಿ ತರುತ್ತದೆ.
ಮಿಚೆಲ್ ಬಾವೂ ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗಿನ ಕುಟುಂಬದ ಜೀವನ ಸಂಬಂಧಿತ ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ತನ್ನ ಪುಟ್ಟ ಮಗ ಮೊದಲ ಟ್ರಾಮ್ ಸವಾರಿಯನ್ನು ಅನುಭವಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ವೀಡಿಯೊದಲ್ಲಿ, ಸಂತೋಷದಿಂದಿರುವ ಮಗು ತನ್ನ ಸುತ್ತಮುತ್ತಲಿನ ಪ್ರದೇಶವನ್ನು ಟ್ರಾಮ್‌ನಲ್ಲಿ ಆಶ್ಚರ್ಯದಿಂದ ಸುತ್ತುವಾಗ ನಕ್ಕು ನಲಿಯುತ್ತದೆ.
ನಾವು ಇತ್ತೀಚೆಗೆ ಮಕ್ಕಳನ್ನು ಅವರ ಮೊದಲ ಟ್ರಾಮ್ ಸವಾರಿಗೆ ಕರೆದೊಯ್ದಿದ್ದೆವು. ಅವರು ಆನಂದಿಸಿದರು ಎಂದು ಮಿಚೆಲ್ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.
ಇದನ್ನು ನೋಡಿದ ನೆಟ್ಟಿಗರು ಮಗುವಿನ ನಗು ಕಂಡು ಸಂತಸಗೊಂಡು ಕಾಮೆಂಟ್ ಮಾಡಿದ್ದಾರೆ. ಒಬ್ಬರಂತೂ ಈ ನಗುವನ್ನು ಹಿಡಿದಿಡಬೇಕು ಎಂದು ಹೇಳಿದ್ದಾರೆ.