
ಈ ಸ್ವಾರಸ್ಯಕರ ಘಟನೆ ನಡೆದಿರುವುದು ಅರ್ಜೆಂಟೀನಾದಲ್ಲಿ. ಚಿಕ್ಕ ಕ್ಲಿಪ್ನಲ್ಲಿ, ಎತ್ತರದ ವ್ಯಕ್ತಿಯೊಬ್ಬನು ಚಿಕ್ಕ ಹುಡುಗನನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಹೋಗುವುದನ್ನು ಕಾಣಬಹುದು, ಈ ಮೂಲಕ ತಂದೆ ಬಾಲಕನನ್ನು ದೂರದಿಂದ ಗುರುತಿಸಬಹುದು ಎಂದೆಣಿಸಿದ. ಆದರೆ, ಅದು ಸಾಧ್ಯವಾಗಲಿಲ್ಲ. ಈ ವೇಳೆ ಅಲ್ಲಿದ್ದ ಬೀದಿ ಸಂಗೀತ ಕಲಾವಿದರು ನೆರವಿಗೆ ಬಂದರು. ಆ ಬಾಲಕನ ತಂದೆ ಹೆಸರನ್ನು ರಾಗವಾಗಿ ಹಾಡಲು ಆರಂಭಿಸಿದರು, ಇದನ್ನು ಕೇಳಿಸಿಕೊಂಡ ಅಲ್ಲಿದ್ದ ನೂರಾರು ಜನರೂ ಸಹ ಬಾಲಕನ ತಂದೆ ಎಡ್ವರ್ಡೊ ಹೆಸರು ಜಪಿಸಲು ಪ್ರಾರಂಭಿಸಿದರು.
ಹುಡುಗ ಮಾತ್ರ ತಂದೆಯನ್ನು ಕಾಣದೇ ಅಳುವುದು ನಿಲ್ಲಿಸಿರಲಿಲ್ಲ. ಆದರೆ. ಎಲ್ಲಾ ಚಪ್ಪಾಳೆ ಮತ್ತು ಎಡ್ವರ್ಡೊ ಎಂದು ಕರೆದಿದ್ದರಿಂದ ತನ್ನ ಮಗುವನ್ನು ಗುರುತಿಸಲು ತಂದೆಗೆ ಸಾಧ್ಯವಾಯಿತು. ತಕ್ಷಣವೇ ಓಡೋಡಿ ಬಂದು ತನ್ನ ತೋಳುಗಳಲ್ಲಿ ಅಪ್ಪಿಕೊಂಡರು. ಆ ಭಾವನಾತ್ಮಕ ಪುನರ್ಮಿಲನ ನೋಡುಗರಲ್ಲಿ ನಗು ತರಿಸುವುದರಲ್ಲಿ ಅನುಮಾನವೇ ಇಲ್ಲ.
ನೆಟ್ಟಿಗರು ಇದನ್ನು ನೋಡಿ ಭಾವುಕ ಕಾಮೆಂಟ್ ಮಾಡಿದ್ದಾರೆ. ಕೆಲವರು ತಮ್ಮ ಜೀವನದ ನೆನಪುಗಳನ್ನು ಹಂಚಿಕೊಂಡಿದ್ದಾರೆ.